ಐಸಿಸಿ ರೆಫ್ರಿಗಳ ಪ್ಯಾನಲ್​ನಲ್ಲಿ ಭಾರತದ ಲಕ್ಷ್ಮೀಗೆ ಸ್ಥಾನ..!

ಭಾರತದ ಮಾಜಿ ಮಹಿಳಾ ಕ್ರಿಕೆಟರ್​ ಹಾಗು ರೆಫ್ರಿಗೆ ಐಸಿಸಿ ಹೊಸ ಜವಬ್ದಾರಿ ನೀಡುವುದರ ಮೂಲಕ ಗೌರವಿಸಿದೆ.​ಐಸಿಸಿ ರೆಫ್ರಿಗಳ ಪ್ಯಾನಲ್​ನಲ್ಲಿ ಜಿ.ಎಸ್ ಲಕ್ಷ್ಮಿಗೆ ಸ್ಥಾನ ನೀಡಿದೆ.ಇದರೊಂದಿಗೆ ಈ ಗೌರವಕ್ಕೆ ಪಾತ್ರರಾದ ಮೊದಲ ಮಹಿಳಾ ರೆಫ್ರಿ ಎಂಬ ಹಿರಿಮೆ 51 ವರ್ಷದ ಲಕ್ಷ್ಮಿ ಮುಡಿಗೇರಿದೆ.ಮಹಿಳೆಯರ ಪಂದ್ಯಗಳಿಗೆ ಮಾತ್ರ ರೆಫ್ರಿಯಾಗಿರುತ್ತಿದ್ದ ಗಂಡಕೋಟ ಸರ್ವ ಲಕ್ಷ್ಮಿ, ಇನ್ನು ಮುಂದೆ ಪುರುಷರ ಕ್ರಿಕೆಟ್​ ಪಂದ್ಯಕ್ಕೂ ರೆಫ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.2008-09ರಲ್ಲಿ ದೇಶಿ ಮಹಿಳಾ ಕ್ರಿಕೆಟ್​​ನ ರೆಫ್ರಿಯಾಗಿ ನೇಮಕವಾದ ಲಕ್ಷ್ಮಿ, ನಂತರ ಐಸಿಸಿ ಮಹಿಳಾ ರೆಫ್ರಿಗಳ ಪ್ಯಾನಲ್​ನಲ್ಲಿ ಸ್ಥಾನ ಪಡೆದ್ರು.ಈವರೆಗು ಮೂರು ಏಕದಿನ ಹಾಗು 3 ಟಿ20 ಪಂದ್ಯಗಳಲ್ಲಿ ರೆಫ್ರಿಯಾಗಿ ಲಕ್ಷ್ಮಿ ಕಾರ್ಯನಿರ್ವಹಿಸಿದ್ದಾರೆ.ಮೂಲತ: ಆಂಧ್ರಪ್ರದೇಶದ ರಾಜಮಂಡ್ರಿಯವರಾದ ಲಕ್ಷ್ಮಿ, ದೇಶೀಯ ಕ್ರಿಕೆಟ್​ನಲ್ಲಿ ಬಿಹಾರ್, ಆಂದ್ರಪ್ರದೇಶ, ಸೌತ್​ಝೋನ್​, ಈಸ್ಟ್​​ಝೋನ್, ರೈಲ್ವೇಸ್ ತಂಡದ ಪರ ಆಡಿದ್ದಾರೆ.ಲಕ್ಷ್ಮಿ ತಂದೆ ಶೇಷಗಿರಿ ಶರ್ಮಾ ಟಾಟಾ ಇಂಜಿನಿಯರಿಂಗ್ ಲೋಕೋಮೊಟಿವ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ರು.ಇದರಿಂದ ಲಕ್ಷ್ಮಿ ತಮ್ಮ ವಿದ್ಯಾಭ್ಯಾಸವನ್ನ ಜಮ್​ಶೆಡ್​ಫುರ್​ನಲ್ಲಿ ಪೂರ್ಣಗೊಳಿಸಿದ್ರು.ಸದ್ಯ,ದಕ್ಷಿಣ ಮಧ್ಯೆ ರೈಲ್ವೇ ಪಿಆರ್​ಓ ಆಫೀಸ್​​ನಲ್ಲಿ ಮುಖ್ಯ ಮೇಲ್ವಿಚಾರಕಿಯಾಗಿ ಲಕ್ಷ್ಮಿ ಕಾರ್ಯನಿರ್ವಹಿಸುತ್ತಿದ್ದಾರೆ.ಇತ್ತೀಚೆಗೆ ಆಸ್ಟ್ರೇಲಿಯಾದ ಕ್ಲಾರಿ ಪೋಲೊಸಾಕ್​ ಪುರುಷರ ಕ್ರಿಕೆಟ್ ಪಂದ್ಯದಲ್ಲಿ ಅಂಪೈರಿಂಗ್ ಮಾಡಿದ ಮೊದಲ ಮಹಿಳೆ ಎಂಬ ದಾಖಲೆಗೆ ಪಾತ್ರರಾದ್ರು.