ಆನೇಕಲ್​ನಲ್ಲಿ ಮತ್ತೆ ಕಾಣಿಸಿಕೊಂಡ ಗಜಪಡೆ

ಆನೇಕಲ್​​: ತಮಿಳುನಾಡು ಗಡಿಭಾಗದ ಹೊಸೂರು ಬಳಿಯ ತುಪ್ಪಗಾನಪಲ್ಲಿ ಗ್ರಾಮದಲ್ಲಿ ಮತ್ತೆ ಸುಮಾರು 40 ಗಜಪಡೆ ಕಾಣಿಸಿಕೊಂಡಿದೆ.
ಆನೆಗಳ ಗುಂಪು ಸತತ 1 ತಿಂಗಳಿಂದ ಈ ಭಾಗದಲ್ಲಿ ಬೀಡುಬಿಟ್ಟಿದ್ದು, ಗದ್ದೆ, ತೋಟದಲ್ಲಿನ ಬೆಳೆ ನಾಶ ಮಾಡುತ್ತಿವೆ. ಇಂದು ರಾಜ್ಯ ಹೆದ್ದಾರಿ ಮೇಲೆ ಆನೆಗಳು ಪ್ರತ್ಯಕ್ಷವಾಗಿದ್ದು, ರಾಜಾರೋಷವಾಗಿ ರಸ್ತೆ ಕ್ರಾಸ್ ಮಾಡಿಕೊಂಡು ಹೋಗಿವೆ.

ಈ ಮೊದಲು ಆನೆಗಳ ಕಾಟಕ್ಕೆ ಹೊಸೂರಿನಲ್ಲಿ 3 ಮಂದಿ ಬಲಿಯಾಗಿದ್ದಾರೆ. ಆನೆಗಳ ನಿರಂತರ ಕಾಟಕ್ಕೆ ಬೇಸತ್ತ ಗ್ರಾಮಸ್ಥರು, ‘ಈ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ. ಆನೆಗಳ ದಾಳಿಯಿಂದ ಸಾವನ್ನಪ್ಪಿದವರಿಗೆ ಹಾಗೂ ನಾಶವಾದ ಬೆಳೆಗೆ ಪರಿಹಾರವನ್ನು ಕೂಡ ನೀಡಿಲ್ಲ’ ಅಂತಾ ಆರೋಪಿಸಿದ್ದಾರೆ.