ವಧು ಡ್ರೆಸ್​​ನಲ್ಲಿ ಬಾಯ್​ಫ್ರೆಂಡ್​​ ಮದುವೆಗೆ ಹಳೇ ಲವರ್​ ಎಂಟ್ರಿ, ಅತ್ಲಾಗೆ ಆ ಹುಡುಗಿ-ಇತ್ಲಾಗೆ ಈ ಹುಡುಗಿ..!

ಇನ್ನೇನು ತಾಳಿ ಕಟ್ಟಬೇಕು…., ಅಷ್ಟರಲ್ಲಿ ಮದುವೆ ಮನೆಗೆ ನುಗ್ಗಿ ನಿಲ್ಸೀ.. ಅಂತ ಕಿರುಚೋದನ್ನ ನೀವು ಸಿನಿಮಾಗಳಲ್ಲಿ ನೋಡಿರ್ತೀರ. ನಿಜ ಜೀವನದಲ್ಲೂ ಮಂಟಪದಲ್ಲಿ ಮದುವೆ ಮುರಿದು ಬಿದ್ದ ಸಾಕಷ್ಟು ಪ್ರಕರಣಗಳಿವೆ. ಹಾಗೇ ಇಲ್ಲೊಬ್ಬಳು ಯುವತಿ ತನ್ನ ಎಕ್ಸ್​ ಬಾಯ್​ಫ್ರೆಂಡ್​​ ಮದುವೆಗೆ ಹೋಗಿ, ಮದುವೆಯಾಗದಂತೆ ಆತನನ್ನು ಬೇಡಿಕೊಂಡಿದ್ದಾಳೆ. ಚೈನಾದಲ್ಲಿ ನಡೆದಿರೋ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅದ್ರಲ್ಲೂ ಆ ಯುವತಿ ವಧುವಿನಂತೆ ಡ್ರೆಸ್​​ ಧರಿಸಿ, ಅಲಂಕಾರ ಮಾಡಿಕೊಂಡು ಹೋಗಿದ್ದಾಳೆ. ವರ ಇನ್ನೇನು ತನ್ನ ಹೊಸ ಪತ್ನಿಗೆ ಕಿಸ್​ ಮಾಡಬೇಕು ಎನ್ನುವಷ್ಟರಲ್ಲಿ ಈಕೆ ಎಂಟ್ರಿ ಕೊಟ್ಟಿದ್ದಾಳೆ. ಎಕ್ಸ್​ ಲವರ್​ ಕೈ ಹಿಡಿದು ಅಳುತ್ತಾ, ನನ್ನನ್ನು ಕ್ಷಮಿಸು ಎಂದು ಬೇಡಿಕೊಂಡಿದ್ದಾಳೆ. ಈ ವೇಳೆ ಕೊಂಚ ಗೊಂದಲಕ್ಕೀಡಾದ ವರ, ಆಕೆಯಿಂದ ಬಿಡಿಸಿಕೊಳ್ಳಲು ಯತ್ನಿಸಿದ್ದಾನೆ. ಆದ್ರೆ ಯುವತಿ ಮಾತ್ರ ಆತನ ಕೈ ಬಿಡದೆ ಮತ್ತಷ್ಟು ರೋಧಿಸಿದ್ದಾಳೆ.

ಹೊಸ ಹುಡುಗಿ ಕೈಯಲ್ಲಿ ಕೆಂಪಾದ ಗೋರಂಟಿ, ಹಳೆ ಗೆಳತಿ ಕೆಮ್ಮಿದರೆ ಪ್ರಳಯಾನೆ ಗ್ಯಾರಂಟಿ ಅನ್ನೋ ಹಾಡಿನಂತಾಗಿತ್ತು ಆತನ ಪರಿಸ್ಥಿತಿ. ಆತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ ಮಧ್ಯೆ ವರ ಏನು ಮಾಡಬೇಕು ಅಂತ ಗೊತ್ತಾ ಗದೆ ಕನ್​ಫ್ಯೂಸ್​ ಆಗಿದ್ದ. ಕೊನೆಗೆ ನವವಧು ಸಿಟ್ಟಿನಿಂದ ವರನ ಕೈ ಬಿಟ್ಟು ಅಲ್ಲಿಂದ ಹೊರನಡೆಯೋದನ್ನ ವಿಡಿಯೋದಲ್ಲಿ ಕಾಣಬಹುದು.

ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಯುವತಿ ಹಾಗೂ ವರ ಪರಸ್ಪರ ಅನ್ಯೋನ್ಯತೆ ಇಲ್ಲದ ಕಾರಣ ಬ್ರೇಕಪ್​​ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದ್ರೆ ಆಕೆ ಮದುವೆಗೆ ಬಂದು, ನನ್ನದೇ ತಪ್ಪು, ಕ್ಷಮಿಸಿಬಿಡು ಅಂತ ಪಶ್ಚಾತ್ತಾಪಪಟ್ಟಿದ್ದಾಳೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv