ಹಾರ ಹಾಕೋ ಜೋಶ್​​ನಲ್ಲಿ ಹಿಂಗಾ ಮಾಡೋದು..!

ನವದೆಹಲಿ: ಮದುವೆ ಸಮಾರಂಭ ಅಂದ್ಮೇಲೆ ಅಲ್ಲಿ ಒಂದಲ್ಲಾ ಒಂದು ತಮಾಷೆಯ ಪ್ರಸಂಗ ನಡೆಯೋದು ಕಾಮನ್​. ಅದರಲ್ಲೂ ವರ ಹಾಗೂ ವಧು ಸೆಂಟರ್​​ ಆಫ್​ ಅಟ್ರಾಕ್ಷನ್ ಆಗಿರ್ತಾರೆ. ಸ್ಟೇಜ್​ ಮೇಲೆ ಬಂದ ತಕ್ಷಣ ವಧು ವರ ಹಾರ ಬದಲಾಯಿಸಿಕೊಳ್ತಾರೆ. ಈ ವೇಳೆ ವರನ ಸಂಬಂಧಿಕರು ಅಥವಾ ಸ್ನೇಹಿತರು ಆತನನ್ನ ಹಿಡಿದು ಮೇಲೆತ್ತಿ, ವಧುವಿಗೆ ಹಾರ ಹಾಕಲು ಕಷ್ಟವಾಗುವಂತೆ ಸ್ವಲ್ಪ ರೇಗಿಸೋದು ಕಾಮನ್​. ಆದ್ರೆ ಈ ಮದುವೆಯಲ್ಲಿ ನಡೆದಿದ್ದೇ ಬೇರೆ.

ಮೊದಲಿಗೆ ವಧು ಹಾರವನ್ನ ವರನಿಗೆ ಹಾಕ್ತಾಳೆ. ನಂತರ ವರನ ಸರದಿ ಬಂದಾಗ ಹಾರ ಹಾಕೋ ಜೋಶ್​​ನಲ್ಲಿ ಜೋರಾಗಿ ಎಸೆದಿದ್ದಾನೆ. ಹೀಗಾಗಿ ಹಾರ ವಧುವಿನ ಕುತ್ತಿಗೆಗೆ ಬೀಳೋ ಬದಲು ಆಕೆಗೆ ರಿಂಗ್​ನಂತೆ ಸೊಂಟದವರೆಗೂ ಹೋಗಿದೆ. ಈ ವೇಳೆ ಅಲ್ಲಿದ್ದ ಸಂಬಂಧಿಕರು ಹಾಗೂ ಸ್ನೇಹಿತರು ನಗಲು ಶುರು ಮಾಡಿದ್ದಾರೆ. ಬಳಿಕ ವರ ಹಾರವನ್ನ ತೆಗೆದು ಮತ್ತೆ ವಧುವಿನ ಕುತ್ತಿಗೆಗೆ ಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, 96 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

भाई एहसान कर रहा है किया वरमाला डाल कर….

भाई एहसान कर रहा है किया वरमाला डाल कर….

Posted by 5-Minute Awesomeness on Sunday, June 24, 2018

ನಿಮ್ಮ ಸಲಹೆ ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv