ಮದುವೆ ಮನೆಯಿಂದ ಮದುಮಗನೇ ನಾಪತ್ತೆ..!

ತುಮಕೂರು: ಮದುವೆ ಮನೆಯಲ್ಲಿ ಎಲ್ಲೆಡೆ ಸಂಭ್ರಮ ಸಡಗರ. ವಿವಾಹ ಕಾರ್ಯಕ್ರಮಕ್ಕಾಗಿ ದೂರದ ಊರಿನಿಂದ ಆಗಮಿಸಿದ ಸಂಬಂಧಿಗಳು. ವಧು ವರರನ್ನ ಕಣ್ತುಂಬಿಕೊಳ್ಳುವ ಮುಂಚೆಯೇ ಎಲ್ಲರಿಗೂ ಒಂದು ಆಶ್ಚರ್ಯ ಮೂಡಿತ್ತು. ಆಶ್ಚರ್ಯ ಏನಪ್ಪಾ ಅಂದ್ರೆ, ಮದುವೆ ಆಗಬೇಕಿದ್ದ ವರನೇ ನಾಪತ್ತೆ ಆಗಿದ್ದ.
ಹೌದು, ತುಮಕೂರಿನ ಯಡಿಯೂರಿನಲ್ಲಿ ನಿನ್ನೆ ಈ ಘಟನೆ ನಡೆದಿದೆ. ಮದುವೆ ಮನೆಯಿಂದ ನಾಪತ್ತೆಯಾದ ವರನನ್ನು ಕಲ್ಲೇಗೌಡನದೊಡ್ಡಿಯ ಶಿವಕುಮಾರ್​​ ಎಂದು ಹೇಳಲಾಗಿದೆ. ಕುಣಿಗಲ್​ ತಾಲೂಕಿನ ಬಿಳಿ ದೇವಾಲಯದಲ್ಲಿ ಈತನಿಗೆ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು. ಯಡಿಯೂರಿನ ಹನುಮಮ್ಮ ತಿಮ್ಮೇಗೌಡ ಕನ್ವೇಷನ್​​ ಹಾಲ್​ನಲ್ಲಿ ನಿನ್ನೆ ಮತ್ತು ಇಂದು ನಡೆಯಬೇಕಿದ್ದ ಮದುವೆಯಲ್ಲಿ ವರ ನಾಪತ್ತೆ ಆಗಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿದೆ. ಮದುವೆ ಸಮಾರಂಭದಲ್ಲಿ ಸಾವಿರಾರು ಜನರಿಗೆ ತಯಾರಿಸಿದ್ದ ಅಡುಗೆ ವೇಸ್ಟ್​​ ಆಗಿದೆ. ಅಮೃತೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv