ಸಾಲ ಮನ್ನಾಕ್ಕೆ ಈ ಇಬ್ಬರು ಜನ ಸೇವಕರು ಏನು ಮಾಡಿದ್ದಾರೆ ಗೊತ್ತಾ..!?

ಧಾರವಾಡ: ರಾಜ್ಯದ ರೈತರು ಸಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ‌ಕಾರಣ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರೋರ್ವರು ತಮಗೆ ಇಷ್ಟು ದಿನ ಬಂದಿದ್ದ ಗೌರವ ಧನವನ್ನು ಸರ್ಕಾರಕ್ಕೆ ವಾಪಸ್ ನೀಡಲು ಮುಂದಾಗಿದ್ದಾರೆ!

ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಬೆಂತೂರ ತಮಗೆ ನೀಡಲಾಗಿದ್ದ ಗೌರವ‌ ಧನವನ್ನ ವಾಪಸ್ ನೀಡಲು ಮುಂದಾಗಿದ್ದು, ಗೌರವ ಧನದ ಗೌರವ ಮತ್ತು ರೈತರ ಬಗೆಗಿನ ಗೌರವವನ್ನ ದುಪ್ಪಟ್ಟುಗೊಳಿಸಿದ್ದಾರೆ. ರಾಜ್ಯದ ರೈತರು ಸಾಲದಿಂದ ಕಂಗೆಟ್ಟಿದ್ದಾರೆ ಹೀಗಾಗಿ ರೈತರ ಸಾಲ ಮನ್ನಾ ಸಲುವಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ತಮ್ಮಿಂದ ಇದು ಅಳಿಲು ಸೇವೆ ಎಂದು ಸದಸ್ಯರು ಇಂಗಿತ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗಿನ ಗೌರವ‌ ಧನ ₹ 1.002 ಲಕ್ಷ ಹಾಗೂ ಮುಂಬರುವ ಗೌರವ ಧನವನ್ನೂ ರೈತರ ಸಾಲ ಮನ್ನಾ ಲೆಕ್ಕಕ್ಕೆ ನೀಡುವುದಾಗಿ ಅವರು ಹೇಳಿದರು. ಅಲ್ಲದೇ, ಗುಡಗೇರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚನ್ನಬಸಗೌಡ ಕೂಡಾ ತಮಗೆ ಸಂದಾಯವಾಗಿರುವ ಇಲ್ಲಿಯವರೆಗಿನ ₹ 75 ಸಾವಿರ ಗೌರವ ಧನನ್ನು ಸರ್ಕಾರಕ್ಕೆ ವಾಪಸ್‌ ನೀಡಲಿದ್ದಾರೆ.
ಈಗಾಗಲೇ ಈ ವಿಷಯವನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದು, ಇದಕ್ಕಾಗಿ ಹೊಸ ಬ್ಯಾಂಕ್ ಖಾತೆ ತರೆಯುವುದಾಗಿ ಸಿಎಂ ಹೇಳಿದ್ದಾರೆ ಅಂತಾ ತಿಳಿಸಿದರು. ಇವರಿಬ್ಬರು ನಾಳೆ ಬೆಂಗಳೂರಿಗೆ ತೆರಳಲಿದ್ದು, ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಗೌರವ ಧನವನ್ನು ಡಿಡಿ ರೂಪದಲ್ಲಿ ವಾಪಸ್ ಮಾಡಲಿದ್ದಾರೆ. ಇವರ ಈ ನಿರ್ಧಾರ ಬಗ್ಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv