ಸತತ 6ನೇ ಬಾರಿಗೆ ಗ್ರಾಪಂ ಉಪ ಚುನಾವಣೆ ಬಹಿಷ್ಕಾರ !

ದಾವಣಗೆರೆ: ಸದಸ್ಯ ಸ್ಥಾನವನ್ನು 4 ರಿಂದ 8ಕ್ಕೆ ಏರಿಸಲು ಆಗ್ರಹಿಸಿ ಕಣಿವಿಹಳ್ಳಿ ಗ್ರಾಮಸ್ಥರು ಸತತ 6ನೇ ಬಾರಿಗೆ ಗ್ರಾಮ ಪಂಚಾಯತಿಯ ಉಪ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕಣಿವಿಹಳ್ಳಿ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.

ಗ್ರಾಮ ಪಂಚಾಯತ್​ನಲ್ಲಿ ಜೂನ್​ 14ರಂದು ನಡೆಯಬೇಕಿದ್ದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂ. 2 ಕಡೆ ದಿನವಾಗಿತ್ತು. ನಿನ್ನೆ ಸಂಜೆ ಆದ್ರೂ ಯಾರು ಕೂಡಾ ಉಮೇದುವಾರಿಕೆ ಸಲ್ಲಿಸಿಲ್ಲ. ನಂದಿ ಬೇವೂರು ಪಂಚಾಯತಿ ವ್ಯಾಪ್ತಿಯಲ್ಲಿ ಕಣಿವಿಹಳ್ಳಿ ಗ್ರಾಮಕ್ಕೆ ‌ಮೊದಲು 5 ಸದಸ್ಯ ಸ್ಥಾನಗಳಿದ್ದವು. 2015ರಲ್ಲಿ ಚುನಾವಣಾ ಆಯೋಗ ಗ್ರಾಮ ಪಂಚಾಯತಿ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಿತ್ತು. ಪುನರ್ ವಿಂಗಡಣೆ ವೇಳೆ ಸದಸ್ಯ ಸ್ಥಾನ 5 ರಿಂದ 4 ಕ್ಕೆ ಕಡಿತಗೊಳಿಸಲಾಗಿತ್ತು. ಹೀಗಾಗಿ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಗ್ರಾಮಸ್ಥರು ಕೋರ್ಟ್ ಮೊರೆ ಹೋಗಿದ್ದರು. ಗ್ರಾಮದಲ್ಲಿ 2 ಸಾವಿರ ಮತದಾರರು ಇದ್ದಾರೆ. ಸದಸ್ಯ ಸ್ಥಾನವನ್ನು 8ಕ್ಕೆ ಏರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv