ನೈರುತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯನ್ನು ಗೆಲ್ಲಿಸಿ: ಉಪನ್ಯಾಸಕ ಬಸವರಾಜ್​​

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ರಮೇಶ್​ ಸ್ಪರ್ಧಿಸಿದ್ದು ಅವರಿಗೆ ಪದವೀಧರರು ಬೆಂಬಲಿಸಬೇಕೆಂದು ವಿಕಲಚೇತನ ಹಾಗೂ ಗಣಿತ ಮತ್ತು ವಿಜ್ಞಾನ ಉಪನ್ಯಾಸಕ ಬಸವರಾಜ್​ ಉಂಬ್ರಾಣಿ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪದವೀಧರ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದು ಅವುಗಳನ್ನು ಸುಧಾರಿಸಲು ರಮೇಶ್​ರನ್ನು ಗೆಲ್ಲಿಸಬೇಕು. ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆ ಆಗಿದ್ದು, ನಿರುದ್ಯೋಗ ಹೆಚ್ಚಾಗುತ್ತಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗಳನ್ನು ತಡೆಯುವಲ್ಲಿ ರಮೇಶ್​ ಅವರು ಸೂಕ್ತ ವ್ಯಕ್ತಿ ಎಂದು ಬಸವರಾಜ್​ ಹೇಳಿದರು.

2 ಬಾರಿ ಕೆಎಎಸ್​, ಒಂದು ಬಾರಿ ಯುಪಿಎಸ್​ಸಿ ಪರೀಕ್ಷೆ ಬರೆದಿದ್ದೇನೆ. ರಾಜ್ಯದ ಎಲ್ಲಡೆ ವಿಜ್ಞಾನ, ಗಣಿತ, ವ್ಯಕ್ತಿತ್ವ ವಿಕಸನ ವಿಷಯಗಳ ಕುರಿತು ತರಬೇತಿ ನೀಡುತ್ತಿದ್ದೇನೆ. ಅಲ್ಲದೆ ನನ್ನ ಬುದ್ದಿವಂತಿಕೆಯನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್​ ಕಲಾಂ ಅವರು ಇದು ಹೇಗೆ ಸಾಧ್ಯ ಎಂದು ಕೇಳಿದ್ದರು ಎಂದು ಬಸವರಾಜ್​ ಸ್ಮರಿಸಿಕೊಂಡರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv