ಈಶಾನ್ಯ ವಲಯದ ಪದವೀಧರ ಕ್ಷೇತ್ರದ ಮತದಾನ ಶಾಂತಿಯುತ

ಯಾದಗಿರಿ: ಇಂದು ಜಿಲ್ಲೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ನಡೆಯಿತು. ಬೆಳಿಗ್ಗೆ 7ಗಂಟೆಯಿಂದ ಸಂಜೆ 5ಗಂಟೆ ವರೆಗೆ ಮತದಾನ ನಡೆಯಿತು. ಜಿಲ್ಲೆಯಾದ್ಯಂತ ಒಟ್ಟು 5159 ಮತದಾರರ ಪೈಕಿ, 3738 ಮತದಾರರು ತಮ್ಮ ಹಕ್ಕು ಚಲಾಯಿಸಿದ್ರು. ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ತುಂತುರು ಮಳೆ ಆರಂಭವಾಗಿದ್ದರಿಂದ ಸ್ವಲ್ಪ ಮಟ್ಟಿಗೆ ಮತದಾನ ಕಡಿಮೆಯಾಗಿದೆ ಎನ್ನಲಾಗ್ತಿದೆ. ಮಳೆ ನಡುವೆ ಜನ್ರು ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಮತ ಚಲಾಯಿಸಿದ್ದಾರೆ. ಕೆಲವರು ಮೊದಲನೇ ಬಾರಿ ತಮ್ಮ ಹಕ್ಕು ಚಲಾಯಿಸಿ ಖುಷಿ ಪಟ್ಟರೆ, ಇನ್ನೂ ಕೆಲವರು ಸಾಮಾನ್ಯವಾಗಿ ಎಂದಿನಂತೆ ಮತದಾ‌ನ ಮಾಡಿದ್ರು. ಜಿಲ್ಲೆಯಲ್ಲಿ ಒಟ್ಟು ಶೇಕಡಾ 72% ರಷ್ಟು ಮತದಾನವಾಗಿದೆ ಎಂದು ಚುನಾವಣೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಇಂದು ನಡೆದ ಈಶಾನ್ಯ ಪದವೀಧರ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv