ಒಂದೂವರೆ ವರ್ಷದ ಮಗುವಿನ ಜೀವ ಉಳಿಸಲಿಲ್ಲ..!

ಮಧ್ಯಪ್ರದೇಶ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂಬ ಅಪಸ್ವರಗಳು ಕೇಳಿ ಬರುತ್ತಿವೆ. ಅದ್ರಲ್ಲೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು ಕನಿಷ್ಟ ಮಾನವೀಯತೆಯನ್ನು ಮರೆತು ಕೆಲಸ ಮಾಡುತ್ತಿದ್ದಾರೆ ಅನ್ನುವಂತಹ ಅನುಮಾನಗಳು ಮೂಡ ತೊಡಗಿವೆ. ಇದಕ್ಕೆ ಪುಷ್ಠಿ ನೀಡುವಂತ ಮತ್ತೊಂದು ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಪ್ರಧ್ಯಪ್ರದೇಶದ ಸಾಗರ್​ ಎಂಬಲ್ಲಿ, ಒಂದುವರೆ ವರ್ಷದ ಅಂಶಿಕಾ ಎಂಬ ಮಗು ಸುಟ್ಟ ಗಾಯದಿಂದ ಬುಂದೇಲ್ಕಂಡ್​ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಆದ್ರೆ, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅನ್ನೋದು ಪೋಷಕರ ಆರೋಪ. ಇದರ ವಿಡಿಯೋವೊಂದು ಈಗ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದ್ದು, ಇದಕ್ಕೆ ಕಾರಣವಾದ ವೈದ್ಯೆಯನ್ನ ಅಮಾನತು ಮಾಡಲಾಗಿದೆ.
ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ಮಗುವನ್ನ ಕರೆ ತಂದಾಗ ಕರ್ತವ್ಯದಲ್ಲಿದ್ದ ವೈದ್ಯೆ, ಜ್ಯೋತಿ, ಪೋಷಕರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್ ವ್ಯವಸ್ಥೆ ಇಲ್ಲ. ನೀವೇ ಅದನ್ನ ವ್ಯವಸ್ಥೆ ಮಾಡಿಕೊಂಡು ಬನ್ನಿ ಅಂತ ಹೇಳಿ, ಚಿಕಿತ್ಸೆ ನೀಡದೇ ಸುಮ್ಮನಾಗಿದ್ದಾರೆ. ಹೀಗಾಗಿ ಮಗು ಮೃತಪಟ್ಟಿದೆ ಅನ್ನೋದು ಪೋಷಕರ ಆರೋಪ. ಇದನ್ನ ಅಲ್ಲೇ ಇದ್ದವಱರೋ ತಮ್ಮ ಮೊಬೈಲ್​ನಲ್ಲಿ ಶೂಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv