ಖಿಲ್ಜಿ ರೈತರಿಗೆ ಬೆಂಬಲ ಕೊಟ್ಟಿದ್ದ, ಆದರೆ ಇಂದಿನ ಸರ್ಕಾರಗಳು ಕೊಡುತ್ತಿಲ್ಲ

ಬಳ್ಳಾರಿ: ಅಲ್ಲಾವುದ್ದೀನ್ ಖಿಲ್ಜಿ ಕೂಡ ರೈತರಿಗೆ ಬೆಂಬಲ ಕೊಟ್ಟಿದ್ದ ಆದರೆ ಇಂದಿನ ಸರ್ಕಾರಗಳು ರೈತರಿಗೆ ಬೆಂಬಲ ನೀಡುತ್ತಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಸೋಮನಗುದ್ದು ರಂಗಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾಲ ಮನ್ನಾ ಮಾಡಬೇಡಿ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಎಲ್ಲ ರೈತರ ಖಾತೆಗೆ ₹15 ಲಕ್ಷ ಹಣ ಜಮೆ ಮಾಡಿ ಎಂದರು. ಇನ್ಮುಂದೆ ಸರ್ಕಾರಗಳ ಪ್ರಣಾಳಿಕೆ ಅನುಸಾರ ಹೋರಾಟಗಳನ್ನು ಬೆಳೆಸುತ್ತೇವೆ ಎಂದು ತಿಳಿಸಿದರು. ಸರ್ಕಾರಗಳು ರೈತರನ್ನು ದಡ್ಡರು ಅಂದಿಕೊಂಡಿದ್ದಾರೆ. ನಾವು ಬೆಳೆದಿದ್ದನ್ನು ಉಂಡವರ ಬಳಿ ನಾವು ನ್ಯಾಯ ಕೇಳುತ್ತೇವೆ ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಓದುವ ಮಕ್ಕಳಿಗೆ 25 ಗ್ರೇಸ್ ಅಂಕ ನೀಡಬೇಕು. ದುಬಾರಿ ಶುಲ್ಕ ಕೊಟ್ಟು ಬಡವರಿಗೆ ನಗರಗಳ ಖಾಸಗಿ ಶಾಲೆಗಳಲ್ಲಿ ಓದಲು ಆಗೋಲ್ಲ, ದೇಶದ 60% ಕೃಷಿ ಕಾರ್ಮಿಕರನ್ನು ರೈತರೇ ದಿನಗೂಲಿ ಕೊಟ್ಟು ಸಲುಹುತ್ತಿದ್ದಾರೆ. ರಾಜ್ಯದಲ್ಲಿ 20 ಲಕ್ಷ ಪಂಪ್ ಸೆಟ್​​​ಗಳಿವೆ. ಆದರೆ ಅವುಗಳಿಗೆ ಸಮರ್ಪಕ ವಿದ್ಯುತ್ ಇಲ್ಲ. ಕೇವಲ ಭಾಷಣ ಮಾಡೋದು ಅಭಿವೃದ್ಧಿ ಅಲ್ಲ ಎಂದು ಟೀಕಿಸಿದರು. ರೈತರು ಭಾಷಣವನ್ನು ನಂಬೋದಿಲ್ಲ. ಅವರು ಪ್ರಜ್ಞಾವಂತರಾಗಿದ್ದಾರೆ. ಕುಮಾರಸ್ವಾಮಿ ಸಾಲ ಮನ್ನಾ ಮಾಡದೇ ಇದ್ದರೆ ಪ್ರಬಲ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact:firstnews.tv