ದಸರಾ ಹಬ್ಬದ ಸಿದ್ಧತೆಗೆ ಮುಂದಾದ ಸರ್ಕಾರ

ಬೆಂಗಳೂರು: ಸಮ್ಮಿಶ್ರ ಸರ್ಕಾರ ದಸರಾ ಹಬ್ಬದ ಸಿದ್ಧತೆಗೆ ಮುಂದಾಗಿದೆ. ಇವತ್ತು ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮೊದಲ ದಸರಾ ಸಿದ್ಧತಾ ಸಭೆ ನಡೆಯಲಿದೆ. ಡಿಸಿಎಂ ಡಾ.ಜಿ.ಪರಮೇಶ್ವರ್, ಮೈಸೂರು ಭಾಗದ ಶಾಸಕರು, ಮೈಸೂರು ಜಿಲ್ಲಾಧಿಕಾರಿಗಳು, ಮೈಸೂರಿನ ಪೊಲೀಸ್ ಆಯುಕ್ತರು, ಮೇಯರ್‌, ಉಪ ಮೇಯರ್‌ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.