ಏಮ್ಸ್​​ ಆಸ್ಪತ್ರೆಯಲ್ಲೇ ಸಚಿವ ಸಂಪುಟ ಸಭೆ? ಗೋವಾ ಸಿಎಂ ಪರಿಕ್ಕರ್​ ಕರೆ

ದೆಹಲಿ: ಗೋವಾ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಉಂಟಾಗ್ತಿದ್ದು, ಗೋವಾ ಸಿಎಂ ಮನೋಹರ್​ ಪರಿಕ್ಕರ್​ ತುರ್ತು​​ ಸಭೆ ನಡೆಸಲು ಕ್ಯಾಬಿನೆಟ್​ ಮಿನಿಸ್ಟರ್​​ಗಳನ್ನ ದೆಹಲಿಗೆ ಬರುವಂತೆ ಬುಲಾವ್ ಕೊಟ್ಟಿದ್ದಾರೆ. ಈ ಸಂಬಂಧ ನಿನ್ನೆಯಿಂದ ಕೇಳಿ ಬರ್ತಿರುವ ಊಹಾಪೋಹಗಳಿಗೆ ಬಿಜೆಪಿ ಮೂಲಗಳು ತೆರೆ ಎಳೆದಿವೆ. ಸದ್ಯ ದೆಹಲಿ ಏಮ್ಸ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮನೋಹರ್​ ಪರಿಕ್ಕರ್​, ಲೋಕೋಪಯೋಗಿ ಸಚಿವ ಸುದಿನ್​ ದವಲಿಕರ್​, ಕಂದಾಯ ಸಚಿವ ರೋಹನ್​ ಖೌಂಟೆ, ಕಲೆ ಮತ್ತು ಸಂಸ್ಕೃತಿ ಸಚಿವ ಗೋವಿಂದ ಗೌಡ ಸೇರಿದಂತೆ ಇನ್ನಿತರ ಸಚಿವರಿಗೆ ಸಭೆಗೆ ಆಗಮಿಸುವಂತೆ ಸೂಚಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಮುಖ್ಯಮಂತ್ರಿ ಮನೋಹನ್ ಪರಿಕ್ಕರ್‌, ತಮ್ಮ ಬಳಿಯಿರುವ ಹೆಚ್ಚುವರಿ ಖಾತೆಗಳನ್ನ ಇತರೆ ಸಚಿವರಿಗೆ ವರ್ಗಾಯಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ ಅಂತಾ ಹೇಳಲಾಗ್ತಿದೆ. ಅಲ್ಲದೇ, ಅದಿರು ರಪ್ತು ಮಾಡುವ ಪ್ರಸ್ತಾಪದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಕುರಿತು ಚರ್ಚಿಸಲು ಸಭೆ ಕರೆದಿದ್ದಾರೆ ಅಂತಾನೂ ಹೇಳಲಾಗ್ತಿದೆ. ಇಂದು ಅಥವಾ ನಾಳೆ ಏಮ್ಸ್‌ ಆಸ್ಪತ್ರೆಯಲ್ಲಿ ಕ್ಯಾಬಿನೆಟ್ ಸಭೆ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ಆಸ್ಪತ್ರೆಯಲ್ಲಿಯೇ ಕ್ಯಾಬಿನೆಟ್‌ ಸಭೆ ನಡೆದರೇ ಇತಿಹಾಸವೊಂದು ಸೃಷ್ಟಿಯಾಗಲಿದೆ. ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಕ್ಯಾಬಿನೆಟ್ ಮೀಟಿಂಗ್‌ ನಡೆಸಿದ ಇತಿಹಾಸ ಕ್ರಿಯೇಟ್ ಆಗಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv