ಮಕ್ಕಳಂತೆ ಹೆಗಲ ಮೇಲೇರ್ತವೆ, ಸೆಲ್ಫಿಗೂ ಪೋಸ್ ಕೊಡ್ತವೆ, ಆಫ್ರಿಕಾ ಗೋರಿಲ್ಲಾ ವಿಶೇಷ..!

ಮನುಷ್ಯರಂತೆ ಭಾವನಾತ್ಮಕ ಜೀವಿಗಳಲ್ಲಿ ಗೋರಿಲ್ಲಾಗಳು ಕೂಡ ಒಂದು. ಈ ಗೋರಿಲ್ಲಾಗಳು ಮಾನವ ಜೊತೆ ಆಗಾಗ ಸ್ನೇಹ ಬೆಳಸಿ ಸುದ್ದಿಯಾಗುತ್ತಿರುತ್ತವೆ. ಇನ್ನು ಕೆಲವು ಕೋಪಿಸಿಕೊಂಡು ಹಲವರನ್ನ ಭೀಕರ ಹತ್ಯೆ ಮಾಡಿದ್ದನ್ನೂ ನೋಡಿದ್ದೇವೆ, ಕೇಳಿದ್ದೇವೆ. ಅದ್ರಂತೆ ಆಫ್ರಿಕಾದ ವಿರುಂಗದಲ್ಲಿ ಮಕ್ಕಳಂತೆ ವ್ಯಕ್ತಿಯೊಬ್ಬರ ಹೆಗಲ ಮೇಲೇರಿ ಕೂತು ಫೋಟೋಗೆ ಪೋಸ್​ ನೀಡಿದೆ. ಅದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಶ್ವದ ಅತ್ಯಂತ ದೊಡ್ಡದಾದ ಮತ್ತು ಹಳೆಯದಾದ ವಿರುಂಗ ನ್ಯಾಷನಲ್ ಪಾರ್ಕಿನಲ್ಲಿರುವ ಎರಡು ಗೋರಿಲ್ಲಾಗಳು ಅಲ್ಲಿನ ಅರಣ್ಯಾಧಿಕಾರಿಗಳನ್ನ ತುಂಬಾನೇ ಹಚ್ಚಿಕೊಂಡಿವೆ. ಅಧಿಕಾರಿಗಳನ್ನ ಬಿಟ್ಟಿರಲಾಗದಷ್ಟು ಸಲುಗೆಯಿಂದ ಇದ್ದು, ಎಲ್ಲಿಗೆ ಹೋದರು ಎರಡು ಗೋರಿಲ್ಲಾಗಳು ಹಾಜರಿರುತ್ತವೆ.
ಅದ್ರಲ್ಲೂ ಅರಣ್ಯಾಧಿಕಾರಿ ಸಿದ್ದಿಕಿ ಅನ್ನೋ ಅಧಿಕಾರಿ ಜೊತೆ ಈ ಗೋರಿಲ್ಲಾಗಳು ಮತ್ತಷ್ಟು ಅನೋನ್ಯವಾಗಿವೆ. ಕ್ಯಾಮೆರಾಗೆ ಪೋಸ್ ಕೊಡೋದು, ಅವರ ಹೆಗಲ ಮೇಲೆ ಕೂರೋದು, ಅವರನ್ನ ತಮ್ಮ ಮೈ ಮೇಲೆ ಮಲಗಿಸಿಕೊಳ್ಳೋದೆಲ್ಲಾ ಮಾಡುತ್ತಿವೆ. ಇತ್ತೀಚೆಗೆ ಸೆಲ್ಫಿಗೆ ಪೋಸ್​ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು, ಆಫ್ರಿಕಾದ ವಿರುಂಗಾ ಅರಣ್ಯಗಳಲ್ಲಿ ಅತೀ ಹೆಚ್ಚು ಗೋರಿಲ್ಲಾಗಳು ಇವೆ. ಕಳೆದ 20 ವರ್ಷಗಳಿಂದ ಗೋರಿಲ್ಲಾಗಳ ಬೇಟೆ ಹೆಚ್ಚಾಗುತ್ತಿದೆ. ಗೋರಿಲ್ಲಾಗಳ ಬೇಟೆಯಾಡೋದನ್ನ ತಡೆಯುವುದರಗೋಸ್ಕರ ಹಲವು ಅಭಿಯಾನಗಳು ನಡೆಯುತ್ತಿವೆ.

View this post on Instagram

Virunga is home to around one-third of the world’s endangered mountain gorillas as well as four gorillas who reside in the Senkwekwe Center, the only facility in the world that cares for mountain gorillas in captivity. Located at the Park HQ in Rumangabo, the Center’s inhabitants—Ndeze, Ndakasi, Matabishi, Musuka and bushbuck Pongo—were each victims of poachers or animal traffickers as infants. The orphans are cared for by Senkwekwe’s dedicated staff whose extraordinary work would not be possible without the help of individuals and organizations from around the world who have stepped up to support conservation efforts in Virunga.  Senkwekwe Center is a unique sanctuary offering the orphaned gorillas the chance to lead happy and secure lives in the lush forest enclosure, which was recently expanded this year. To support the mountain orphan gorillas of Senkwekwe and other projects like this one, please consider a donation to Virunga by clicking the link in our bio #congo #drc #rdc #virunga #virunganationalpark #journeyintovirunga #giftofconservation #giving #senkwekwe #mountaingorilla #conservation #teamvirunga #christmas #newyear

A post shared by Virunga National Park (@virunganationalpark) on


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv