ಗೂಗಲ್ ಡ್ರೋನ್​​ ಮೂಲಕ ಆರ್ಡರ್ ಮಾಡೋ ವಸ್ತುಗಳ ಹೋಮ್ ಡೆಲಿವರಿ..!

ಕ್ಯಾನ್​ಬೇರಾ: ಗೂಗಲ್​ ಸಂಸ್ಥೆ ಆಸ್ಟ್ರೇಲಿಯಾದಲ್ಲಿ ಡ್ರೋನ್​ಗಳ ಮೂಲಕ ಆಹಾರ, ಪಾನೀಯ ಹಾಗೂ ಔಷಧಿಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಪರಿಚಯಿಸುತ್ತಿದೆ. ಆಸ್ಟ್ರೇಲಿಯಾದ ನಾಗರಿಕ ವಿಮಾನಯಾನದಿಂದ ಅನುಮೋದನೆ ಪಡೆದ ಬಳಿಕ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್​ಬೇರಾದಲ್ಲಿ ಈ ಉದ್ದಿಮೆ ಸ್ಥಾಪಿಸಿದೆ.

ಗೂಗಲ್​ನ ಪೇರೆಂಟ್ ಕಂಪನಿಯಾಗಿರುವ ಅಲ್ಫಾಬೆಟ್​ ಕಳೆದ 18 ತಿಂಗಳಿನಿಂದ ಆಹಾರ, ಪಾನೀಯ ಹಾಗೂ ಔಷಧಿ, ಕಾಫಿ, ಚಾಕಲೇಟ್ಸ್​ಗಳನ್ನು ಡ್ರೋನ್​ ಮೂಲಕ ತಲುಪಿಸುವುದಕ್ಕೆ ಟ್ರಯಲ್ ನಡೆಸುತ್ತಿತ್ತು. ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳ ಬಗ್ಗೆ ಯೋಚಿಸಿಯೇ ಡ್ರೋನ್​ ಬಿಸ್ನೆಸ್​ಗೆ ಒಪ್ಪಿಗೆ ನೀಡಲಾಗಿದೆ.

ಪ್ರಮುಖ ರಸ್ತೆ​ಗಳನ್ನು ಡ್ರೋನ್ಸ್​ಗಳು ದಾಟುವ ಹಾಗಿಲ್ಲ. ಹಾಗೂ ಡ್ರೋನ್​ಗಳು ಹಾರಾಡುವಾಗ ಜನರಿಗಿಂತ ಕನಿಷ್ಠ ಎತ್ತರದ ಅಂತರ ಕಾಯ್ದುಕೊಳ್ಳಬೇಕು ಎಂಬ ಕೆಲ ಷರತ್ತುಗಳನ್ನು ಕೂಡ ವಿಧಿಸಿದ್ದೇವೆ ಅಂತಾ ಆಸ್ಟ್ರೇಲಿಯಾದ ನಾಗರಿಕ ವಿಮಾನಯಾನ ಸಂಸ್ಥೆಯ ವಕ್ತಾರ ಗಿಬ್ಸನ್​ ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv