40 ದ್ವಿಚಕ್ರ ವಾಹನಗಳಿದ್ದ ಲಾರಿ ಪಲ್ಟಿ

ರಾಯಚೂರು: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಪಕ್ಕದ ಹೊಲಕ್ಕೆ ಉರುಳಿದ ಘಟನೆ ರಾಯಚೂರು ಬಳಿಯ ಪವರ್ ಗ್ರಿಡ್ ಸಮೀಪ ನಡೆದಿದೆ. ಟಿವಿಎಸ್ ಕಂಪನಿಯ ದ್ವಿಚಕ್ರ ವಾಹನಗಳನ್ನು ತುಂಬಿಕೊಂಡು ಮೈಸೂರಿನಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಲಾರಿ ಪಲ್ಟಿಯಾಗಿದೆ.
ಲಾರಿಯಲ್ಲಿ ಒಟ್ಟು 40 ದ್ವಿಚಕ್ರ ವಾಹನಗಳಿದ್ದು, ಘಟನೆಯಲ್ಲಿ 10-12 ವಾಹನಗಳು ಜಖಂ ಗೊಂಡಿವೆ ಎನ್ನಲಾಗ್ತಿದೆ. ಅದೃಷ್ಟವಶಾತ್ ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವೆಸ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv