ಉತ್ತಮ ಮಳೆ, ವಿದ್ಯುತ್​ ಶಾಖೋತ್ಪನ್ನ ಸ್ಥಾವರಗಳು ಸ್ಥಗಿತ

ರಾಯಚೂರು: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಗಳೆಲ್ಲಾ ತುಂಬಿ ಹರಿಯುತ್ತಿವೆ. ಹಾಗಾಗಿ ಜಲ ವಿದ್ಯುತ್​ ಸ್ಥಾವರಗಳಿಂದ ಹೆಚ್ಚು ವಿದ್ಯುತ್​ ಉತ್ಪಾದಿಸಲು ತೀರ್ಮಾನಿಸಿದ್ದು ರಾಜ್ಯದ ಶಾಖೋತ್ಪನ್ನ ಸ್ಥಾವರಗಳನ್ನ ಸ್ಥಗಿತಗೊಳಿಸಲಾಗಿದೆ.

ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಜಲ ಸ್ಥಾವರಗಳಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್​ ಪ್ರಮಾಣ ಹೆಚ್ಚಾಗಿದ್ದು, ಶಾಖೋತ್ಪನ್ನ ಸ್ಥಾವರದಿಂದ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಲಾಗಿದೆ. ಜಿಲ್ಲೆಯ ಆರ್​ಟಿಪಿಎಸ್ ನ 8 ಘಟಕಗಳಿಂದ ಒಟ್ಟು 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಈಗ ಆರ್​ಟಿಪಿಎಸ್ ಸ್ಥಾವರದ 6 ಘಟಕಗಳು ಸ್ಥಗಿತಗೊಳಿಸಿದ್ದು, ಉಳಿದ ಎರಡು ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದನೆ ಮಾಡಲು ತೀರ್ಮಾನಿಸಲಾಗಿದೆ. ಎರಡು ಘಟಕಗಳಿಂದ 326 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಅಂತಾ ಆರ್​ಟಿಪಿಎಸ್ ನ ಉನ್ನತ ಮೂಲಗಳು ಮಾಹಿತಿ ನೀಡಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv