ಸನ್ನಡತೆ ಆಧಾರದ ಮೇಲೆ 10 ಖೈದಿಗಳ ಬಿಡುಗಡೆ

ಧಾರವಾಡ: ಗಾಂಧಿ ಜಯಂತಿ ಅಂಗವಾಗಿ ರಾಜ್ಯಾದ್ಯಂತ ಸನ್ನಡತೆ ಆಧಾರದ ಮೇಲೆ 48 ಖೈದಿಗಳನ್ನು ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಧಾರವಾಡ ಕೇಂದ್ರ ಕಾರ್ಯಾಗ್ರಹದಿಂದ 10 ಖೈದಿಗಳನ್ನು ಇಂದು ಬಿಡುಗಡೆಗೆ ಮಾಡಲಾಯಿತು.
ವಿವಿಧ ಪ್ರಕರಣಗಳಡಿ ಶಿಕ್ಷೆಗೆ ಗುರಿಯಾಗಿದ್ದ ಹಿರೇಗೌಡ ಚಿಕ್ಕಮಗಳೂರು, ಗಿರೀಶ್​ ಬಾವಿಮನಿ ಗದಗ, ವಿ.ಪಿ.ರವಿ ಕೊಡಗು, ಕೃಷ್ಣಪ್ಪಗೌಡ ಮಂಗಳೂರು ಸೇರಿದಂತೆ 10 ಜನ ಖೈದಿಗಳನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಪ್ರಧಾನ ನ್ಯಾಯಾಧೀಶ ಈಶಪ್ಪ ಭೂತೆ, ಸಂಸದ ಪ್ರಲ್ಹಾದ ಜೋಶಿ, ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ , ಜೈಲು ಅಧೀಕ್ಷಕಿ ಡಾ.ಆರ್.ಅನಿತಾ ಸಮ್ಮುಖದಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv