ದರ್ಶನ್ ಮಗ ಆಯ್ತು, ಈಗ ‘ಗಣಿ’ ಮಗನ ಎಂಟ್ರಿ..!

ಸಿನಿಮಾ ರಂಗದಲ್ಲಿ ಸ್ಟಾರ್ ನಟರ ಮಕ್ಕಳು ಸ್ಟಾರ್ ಆಗೋದು ಕಾಮನ್. ಆದ್ರೆ ಇತ್ತೀಚೆಗೆ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ ನಟರ ಮಕ್ಕಳ ಎಂಟ್ರಿ ಬಲು ಜೋರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಯಜಮಾನ ಸಿನಿಮಾದ ಒಂದು ಹಾಡಿನಲ್ಲಿ ಅಪ್ಪನಂತೆ ಭರ್ಜರಿ ಸ್ಟೆಪ್​ ಹಾಕಿ ಮಿಂಚಿದ್ರು. ಅಲ್ಲದೇ ಉಪೇಂದ್ರ ಪುತ್ರಿ ಐಶ್ವರ್ಯ ಕೂಡ ‘ದೇವಕಿ’ ಅನ್ನೋ ಚಿತ್ರದಲ್ಲಿ ಅಮ್ಮನ ಮುದ್ದಿನ ಮಗಳಾಗಿ ಕಾಣಿಸಿಕೊಂಡು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ರು. ಇದೀಗ ಗೋಲ್ಡನ್ ಸ್ಟಾರ್ ‘ಗಣಿ’ ಪುತ್ರ ವಿಹಾನ್ ಎಂಟ್ರಿ ಕೊಟ್ಟಿದ್ದಾನೆ.

ಅಪ್ಪನ ಚಿತ್ರದಲ್ಲಿ ಮಗನ ಧಮಾಕ..!
ಈಗಾಗಲೇ ‘ಚಮಕ್’ ಚಿತ್ರದ ಮೂಲಕ ಮಗಳು ಚಾರಿತ್ರ್ಯಳನ್ನು ಪರಿಚಯಿಸಿದ್ದ ‘ಗಣಿ’ ಇದೀಗ ಗೀತಾ ಚಿತ್ರದ ಮೂಲಕ ಮಗ ವಿಹಾನ್​ನನ್ನು ಬಣ್ಣ್ದದ ಲೋಕಕ್ಕೆ ಪರಿಚಯಿಸೋಕೆ ರೆಡಿಯಾಗಿದ್ದಾರೆ. ಚಿತ್ರದಲ್ಲಿ ವಿಹಾನ್ ಗೆಸ್ಟ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೀಗ ಚಿತ್ರದ ಸೆಟ್​​ನಲ್ಲಿ ಕೈಯಲ್ಲಿ ಬಂದೂಕು ಹಿಡಿದು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತು ಮುದ್ದಾಗಿ ಪೋಸ್ ಕೊಟ್ಟಿದ್ದಾನೆ ವಿಹಾನ್. ಇನ್ನು ಗಣೇಶ್​ ಹೋಮ್​ ಬ್ಯಾನರ್​ನಲ್ಲಿ ಬರ್ತಿರೋ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್, ಕೇರಳದ ನಟಿ ಪಾರ್ವತಿ ಅರುಣ್, ಪ್ರಯಾಗ ಮಾಲ್ಟಿನ್, ಡೈನಾಮಿಕ್​ ಸ್ಟಾರ್​ ದೇವರಾಜ್​ , ಸುಧಾರಾಣಿ, ರಂಗಾಯಣ ರಘು, ಅಚ್ಯುತ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶನವಿದೆ.