ಗಾಂಧೀಜಿ ವಿರುದ್ಧ ಮಾತಾಡಿದ್ದ ಸೌಮಿತ್ರಾಗೆ ಗೇಟ್​ಪಾಸ್ ನೀಡಿದ ಬಿಜೆಪಿ

ಭೋಪಾಲ್: ಮಹಾತ್ಮಾ ಗಾಂಧೀಜಿ ಪಾಕಿಸ್ತಾನದ ರಾಷ್ಟ್ರಪತಿ ಎಂದಿದ್ದ ಮಧ್ಯಪ್ರದೇಶದ ಬಿಜೆಪಿ ಮುಖಂಡ ಅನಿಲ್ ಸೌಮಿತ್ರಾರನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ಅಮಾನತುಗೊಳಿಸಿದೆ. ಜೊತೆಗೆ ತಮ್ಮ ಹೇಳಿಕೆ ಬಗ್ಗೆ ಇನ್ನು 7 ದಿನಗಳಲ್ಲಿ ಉತ್ತರ ನೀಡುವಂತೆಯೂ ಸೌಮಿತ್ರಾಗೆ ಸೂಚಿಸಿದೆ. ಅಮಾನತುಗೊಂಡ ಬಳಿಕವೂ ಮಾತನಾಡಿದ ಸೌಮಿತ್ರಾ, ರಾಷ್ಟ್ರ ವಿಭಜನೆ ಪ್ರಕ್ರಿಯೆಗೆ ಗಾಂಧೀಜಿಯ ಆಶೀರ್ವಾದವೂ ಇತ್ತು. ಆದ್ದರಿಂದ ಅವರು ಪಾಕಿಸ್ತಾನದರ ರಾಷ್ಟ್ರಪಿತ ಎಂಬುದೇ ಸರಿ ಅಂತಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv