ಕುಮಾರಸ್ವಾಮಿಗೆ ದೇವರು ಪರೀಕ್ಷೆ ಒಡ್ಡುತ್ತಿದ್ದಾನೆ- ಹೆಚ್‌.ಡಿ.ದೇವೇಗೌಡ

ತುಮಕೂರು: ಕುಮಾರಸ್ವಾಮಿಗೆ ದೇವರು ಅಧಿಕಾರ ಕೊಟ್ಟು, ಪರೀಕ್ಷಿಸುತ್ತಿದ್ದಾನೆ, ಈ ಪರೀಕ್ಷೆಯಲ್ಲಿ ಗೆಲ್ಲುವುದು ಇದೆಯಲ್ಲ ಅದು ತುಂಬಾ ಕಷ್ಟ ಅಂತ ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡ ಹೇಳಿದ್ದಾರೆ.
ಪಾವಗಡ ತಾಲೂಕಿನ ತಾಳೆಮರದ ಹಳ್ಳಿಯಲ್ಲಿ ಮಾತನಾಡಿದ ಅವರು, 78 ಸ್ಥಾನ ಪಡೆದ ರಾಷ್ಟ್ರೀಯ ಪಕ್ಷ ಕೇವಲ 38 ಸ್ಥಾನ ಗೆದ್ದ ನಮ್ಮ ಪಕ್ಷದ ಬಳಿ ಬಂದು ನೀವೆ ಸಿಎಂ ಆಗಬೇಕು ಅಂತ ಹೇಳುವ ಸನ್ನಿವೇಶ ಇದೆಯಲ್ಲ, ಅದು ನಿಜಕ್ಕೂ ಕಷ್ಟ ಎಂದರು. ನೀವು ಕುಮಾರಣ್ಣ ಸಿಎಂ ಆಗಬೇಕು ಅಂತ ಮನಸ್ಸಿನಲ್ಲಿ ಪಾರ್ಥನೆ ಮಾಡಿದ ಫಲವೇ ಇಂದು ಅವರು ಸಿಎಂ ಆಗಲು ಕಾರಣ ಅಂತ ಹೇಳಿದ್ರು.
ಮುಖ್ಯಮಂತ್ರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ ಎದುರಾಗುತ್ತಿದೆ. ಕುಮಾರಸ್ವಾಮಿಗೆ ಅಧಿಕಾರ ಕೊಡುವುದರ ಜೊತೆಗೆ ದೇವರು ಸಂಕಷ್ಟಗಳನ್ನ ತಂದು, ಪರೀಕ್ಷೆ ಒಡ್ಡುತ್ತಿದ್ದಾನೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅವರು ಹೋರಾಟವೇ ಮಾಡಬೇಕಿದೆ ಅಂತ ದೇವೇಗೌಡ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv