ಲೋಕಸಭೆ ಟಿಕೆಟ್ ಯಾರಿಗೆ ಕೊಟ್ಟರೂ, ಪಕ್ಷದ ಪರ ಕೆಲಸ ಮಾಡ್ತೀನಿ: ಸಂಸದ ಸಿದ್ದೇಶ್ವರ್

ದಾವಣಗೆರೆ:  ಮುಂದಿನ ಲೋಕಸಭೆ ಚುನಾವಣೆಯ ಟಿಕೆಟ್ ನನಗೇ ಕೊಡಬೇಕು ಅಂತೇನಿಲ್ಲ. ಯಾರಿಗೆ ಕೊಟ್ಟರೂ ಪಕ್ಷದ ಪರ ಕೆಲಸ ಮಾಡುತ್ತೇನೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದ್ದಾರೆ.

ನಗರದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾದರೆ ಸ್ವಾಗತವಿದೆ.  ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಯಾರೇ ನಿಂತರೂ ನಮಗೇನು ಭಯವಿಲ್ಲ. ದಾವಣಗೆರೆ ಕ್ಷೇತ್ರದ ಟಿಕೆಟ್ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ಎಂದುರು. ಇನ್ನು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೈ ತಪ್ಪಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದಗಂಗಾ ಶ್ರೀಗಳಿಗೆ ಪ್ರಶಸ್ತಿ ತಪ್ಪಿದ್ದಕ್ಕೆ ನನಗೂ ಬೇಸರವಿದೆ. ಯಾಕೆ ಹೀಗಾಯ್ತು ನಂಗೂ ಗೊತ್ತಿಲ್ಲ. ನಮ್ಮ ಸಂಸದರೊಂದಿಗೆ ಚರ್ಚಿಸಿ, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ  ನೀಡಲು ಕೇಂದ್ರ ಸರ್ಕಾರವನ್ನ ಒತ್ತಾಯ ಮಾಡುತ್ತೇವೆ.  ಈ ಹಿಂದೆ ರಾಜ್ಯ ಸರ್ಕಾರ ಪ್ರಶಸ್ತಿಗೆ ಶಿಫಾರಸು ಮಾಡಿರುವ ಬಗ್ಗೆ  ಗೊತ್ತಿಲ್ಲ. ಮಾಡಿದ್ದರೆ ಶಿಫಾರಸ್ಸಿನ ಪ್ರತಿಯನ್ನ ನನಗೆ ಕೊಡಲಿ ಎಂದು ಅವರು ಹೇಳಿದರು.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ: contact@firstnews.tv