ಇನ್ನೆರಡು ದಿನ ವಿಶ್ವದಾದ್ಯಂತ ನೆಟ್​ ಸಿಗಲ್ವಂತೆ..!

ನ್ಯೂಯಾರ್ಕ್: ಇಂಟರ್‌ನೆಟ್ ಇಲ್ಲದೇ ದಿನ ಹಾಗಿರಲಿ, ಕ್ಷಣಾನೂ ಮುಂದೆ ಹೋಗೋಲ್ಲ ಅನ್ನೋಷ್ಟರ ಮಟ್ಟಿಗೆ ಜಗತ್ತು ಇಂದು ಅಂತರ್ಜಾಲದ ಮೇಲೆ ಅವಲಂಬಿಸಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ನೆಟ್ ಬಳಕೆದಾರರಿಗೆ ಬಿಗ್ ಶಾಕಿಂಗ್​ ನ್ಯೂಸ್​ ತೇಲಿಬಂದಿದೆ. ಇನ್ನೆರಡು ದಿನ ವಿಶ್ವದೆಲ್ಲೆಡೆ ಇಂಟರ್‌ನೆಟ್ ಇರೋದಿಲ್ಲವಂತೆ! ಇದು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೋ ತಕ್ಷಣಕ್ಕೆ ತಿಳಿದುಬಂದಿಲ್ಲ. ಆದ್ರೆ ಸಾಧ್ಯತೆಯಂತೂ ಇದೆ.

ನೆಟ್​ ಸಿಗೋಲ್ಲ, ನೆಟ್​ ಕನೆಕ್ಟ್​ ಆಗ್ತಿಲ್ಲ:
ಮೈಂಟೆನೆನ್ಸ್ ಕಾರಣದಿಂದಾಗಿ ಮುಂದಿನ 48 ಗಂಟೆಗಳ ಕಾಲ ಇಂಟರ್‌ನೆಟ್ ಲಭ್ಯವಿರೋದಿಲ್ಲ ಎಂದು ಜಾಗತಿಕ ಇಂಟರ್‌ನೆಟ್ ಕಾರ್ಪೋರೇಶನ್ ಸಂಸ್ಥೆಯನ್ನು (ICANN) ಉಲ್ಲೇಖಿಸಿ, ಮಾಧ್ಯಮಗಳು ವರದಿ ಮಾಡಿವೆ.

ಇಡೀ ವಿಶ್ವದಲ್ಲೇ 2 ದಿನಗಳ ಕಾಲ ಇಂಟರ್‌ನೆಟ್ ಸೇವೆ ಲಭ್ಯವಿರುವುದಿಲ್ಲ. ಇದು ಭಾರತಕ್ಕೂ ಅನ್ವಯವಾಗಲಿದ್ದು, ಭಾರತದಲ್ಲಿಯೂ ಅಂತಾರ್ಜಾಲ ಸೇವೆ ಸ್ಥಗಿತಗೊಳ್ಳಲಿದೆ.  ICANN ಸಂಸ್ಥೆಯು ಮಂದಿನ 48 ಗಂಟೆಗಳ ಕಾಲ ಇಂಟರ್‌ನೆಟ್ ಮೈಂಟೆನೆನ್ಸ್ ಕಾರ್ಯದಲ್ಲಿ ತೊಡಗಲಿದೆ. ಈ ವೇಳೆ ನೆಟ್ ಸೇವೆಯಲ್ಲಿ ಏರುಪೇರಾಗಲಿದೆ. ಈ ಮೈಂಟೆನೆನ್ಸ್ ಕಾರ್ಯದಿಂದ ಏನು ಪ್ರಯೋಜನ ಆಗಲಿದೆಯೆಂದ್ರೆ ಇಂಟರ್‌ನೆಟ್ ಡೊಮಿನ್ ನೇಮ್ ಸಿಸ್ಟಮ್​ಗೆ (DNS) ಹೆಚ್ಚಿನ ಭದ್ರತೆ ಸಿಗಲಿದೆ. ಇದರಿಂದ ಸೈಬರ್ ಅಟ್ಯಾಕ್ ಪ್ರಮಾಣ ಕಡಿಮೆಯಾಗಲಿದೆ ಎಂದು ತಿಳಿದುಬಂದಿದೆ.