ರೊಟ್ಟಿ ಸೀದೋಗಿದ್ದಕ್ಕೆ ಪತ್ನಿಗೆ ಹೀಗಾ ಮಾಡೋದು…

ಬಂಡಾ(ಉತ್ತರಪ್ರದೇಶ): ಕೆಲವೊಮ್ಮೆ ಸಣ್ಣ ಸಣ್ಣ ತಪ್ಪುಗಳಿಗೂ ಎಂತಹ ದೊಡ್ಡ ಶಿಕ್ಷೆಯನ್ನು ಕೊಡ್ತಾರೆ ಎಂಬುದಕ್ಕೆ ಯುಪಿಯ ಬಂಡಾದಲ್ಲಿ ನಡೆದಿರೋ ಈ ಘಟನೆಯೇ ಜೀವಂತ ಸಾಕ್ಷಿಯಾಗಿದೆ. ಪುರುಷ-ಮಹಿಳೆಯರ ನಡುವಿನ ಸಮಾನತೆ ಹಾಗೂ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರ ವಿರೋಧದ ನಡುವೆಯೂ ತ್ರಿವಳಿ ತಲಾಖ್‌ ರದ್ದು ಮಾಡಿ ವಿಧೇಯಕವನ್ನು ಸಂಸತ್‌ ನಲ್ಲಿ ಜಾರಿಗೆ ತಂದಿತ್ತು. ಆದ್ರೆ ಇಲ್ಲಿನ ಮಹೊಬಾ ಜಿಲ್ಲೆಯ ಪಹ್ರೆತಾ ಗ್ರಾಮದಲ್ಲಿ ಪತಿ ಮಹಾಶಯನೊಬ್ಬ ಪತ್ನಿ ಸೀದೋಗಿರೋ ರೊಟ್ಟಿ ಕೊಟ್ಟಿದ್ದಾಳೆ ಅಂತ ಹೇಳಿ ಪತ್ನಿಗೆ ತ್ರಿವಳಿ ತಲಾಖ್‌ ಮಾದರಿಯಲ್ಲಿ ವಿಚ್ಛೇದನ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಸಂತ್ರಸ್ತೆ, ರೊಟ್ಟಿ ಸೀದೋಗಿದೆ ಅಂತ ಹೇಳಿ ಪತಿ ತಲಾಖ್​ ನೀಡಿದ್ದು, ಬಲವಂತವಾಗಿ ಮನೆಯಿಂದ ಹೊರಹಾಕಿರೋದಾಗಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು, ವಿಚ್ಛೇದನ ಕೊಡೋದಕ್ಕೂ ಮುನ್ನ ಸಂತ್ರಸ್ತ ಮಹಿಳೆಗೆ ಸಿಗರೇಟ್‌ನಿಂದ ಸುಟ್ಟು ಗಾಯಗೊಳಿಸಿದ್ದಾನೆ. ಇನ್ನೂ ಡೈವರ್ಸ್‌ ನೀಡಿರೋದು ಕಾನೂನಿನಡಿಯಲ್ಲಿ ಸಮಾನತೆ ನೀಡುವ ಸಂವಿಧಾನದ 14ನೇ ನಿಯಮವನ್ನು ಉಲ್ಲಂಘಿಸಿದಂತಾಗಿದೆ.