ನೀರೆಂದು ಥಿನ್ನರ್​ ಕುಡಿದಿದ್ದ ಬಾಲಕಿ ಸಾವು

ಕಲಬುರ್ಗಿ: ನೀರು ಅಂತಾ ತಿಳಿದು ಥಿನ್ನರ್ ಕುಡಿದು ಅಸ್ವಸ್ಥಗೊಂಡಿದ್ದ ಏಳು ವರ್ಷದ ಬಾಲಕಿ ಸೌಮ್ಯಾ ಘಂಟಿ ಇಂದು ಚಿಕಿತ್ಸೆ ಫಲಕಾರಿಯಾಗದೇ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಜೂನ್​ 3 ರಂದು ಲಿಂಗನವಾಡಿ ಗ್ರಾಮದಲ್ಲಿ ಬಾಲಕಿಯ ಮನೆಗೆ ಪೇಂಟ್​ ಮಾಡಲು ಬಣ್ಣ ಮತ್ತು ಅದಕ್ಕೆ ಮಿಕ್ಸ್ ಮಾಡೋ ರಾಸಾಯನಿಕ ಥಿನ್ನರ್ ತಂದಿದ್ದರು. ಈ ವೇಳೆ ಥಿನ್ನರ್ ಅನ್ನ ನೀರು ಅಂತಾ ಭಾವಿಸಿದ ಬಾಲಕಿ ಸೌಮ್ಯ ಥಿನ್ನರ್​ ಕುಡಿದು ಅಸ್ವಸ್ಥಗೊಂಡಿದ್ದಳು. ತಕ್ಷಣ ಅವಳನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳು ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಕೂಡಾ ಮಾಡಲಾಗಿತ್ತು. ಆದ್ರೆ ನಿನ್ನೆ ರಾತ್ರಿ ಮತ್ತೆ ಗಂಟಲು ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಅದೇ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ ಬಾಲಕಿ ಸೌಮ್ಯ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ. ಇನ್ನು ಸಾವಿನ ಸುದ್ದಿ ತಿಳಿದ ಸೌಮ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂರ್ಪಕಿಸಿ:contact@firstnews.tv