ಪರೀಕ್ಷೆಗೆ ಲೇಟ್ ಆಗಿದ್ದಕ್ಕೆ ಕುದುರೆ ಹತ್ತಿ ಹೊರಟ ಪೋರಿ..!

ತಿರುವನಂತಪುರಂ: ಪರೀಕ್ಷೆಗೆ ಹೋಗಲು ತಡವಾಗ್ತಿದೆ ಅಂದ್ರೆ ಟೆನ್ಷನ್, ಭಯ ಎಲ್ಲವೂ ಒಮ್ಮೇಲೆ ಶುರುವಾಗುತ್ತೆ. ಅಯ್ಯೋ ಟೈಮ್ ಆಗೋಯ್ತು. ಈ ಹಾಳಾದ ಬಸ್​ ಬೇರೆ ಬರ್ತಿಲ್ಲ ಅಂತಾ ಕೆಲವ್ರು ಬೈಕೊಳ್ಳೋದು ಕಾಮನ್. ಅದ್ರಲ್ಲೂ ಎಸ್​ಎಸ್​ಎಲ್​ಸಿ ಅಥವಾ ದ್ವಿತೀಯ ಪಿಯುಸಿ ಪರೀಕ್ಷೆ ದಿನ ಲೇಟ್ ಆಯ್ತು ಅಂದ್ರೆ ಕಣ್ಣಲ್ಲಿ ನೀರು ಬಂದ್ರೂ ಅಚ್ಚರಿಯಿಲ್ಲ. ಆದ್ರೆ, ಕೇರಳದ ತ್ರಿಸ್ಸೂರಿನ 10ನೇ ತರಗತಿ ವಿದ್ಯಾರ್ಥಿನಿ ಮಾಡಿದ್ದೇ ಬೇರೆ. ಆಕೆಗೆ ಕಾರಣಾಂತರಗಳಿಂದ ಪರೀಕ್ಷೆಗೆ ಹೋಗಲು ತುಂಬಾನೇ ತಡವಾಗಿತ್ತು. ಆದ್ರೆ ಆ ಕ್ಷಣ ಆಕೆ ಆಯ್ದುಕೊಂಡ ದಾರಿ ಮಾತ್ರ ನಿಜಕ್ಕೂ ಬೆರಗಾಗಿಸುತ್ತೆ.

ಎಕ್ಸಾಮ್​ಗೆ ಲೇಟ್​ ಆಗಿದ್ದೇ ತಡ ಆಕೆ ಕುದುರೆಯೇರಿ ತಾನೇ ಸವಾರಿ ಮಾಡುತ್ತಾ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾಳೆ. ಸ್ಕೂಲ್​ ಡ್ರೆಸ್​ನಲ್ಲಿ ಆಕೆ ಪರೀಕ್ಷಾ ಕೇಂದ್ರಕ್ಕೆ ಕುದುರೆ ಮೇಲೆ ಹೊರಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ. ಈಂಥ ಕ್ರಿಟಿಕಲ್ ಟೈಮ್​ನಲ್ಲಿ ಆಕೆಯ​ ಸಮಯಪ್ರಜ್ಞೆಗೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ಇನ್ನೂ ಮಹಿಂದ್ರ ಗ್ರೂಪ್ ಮುಖ್ಯಸ್ಥ ಆನಂದ್ ಮಹಿಂದ್ರಾ ಕೂಡ ವಿದ್ಯಾರ್ಥಿನಿಯನ್ನ ಕೊಂಡಾಡಿದ್ದಾರೆ. ತ್ರಿಸ್ಸೂರಿನಲ್ಲಿ ಯಾರಿಗಾದರೂ ಈ ಹುಡುಗಿ ಗೊತ್ತಿದೆಯಾ? ಆಕೆ ಮತ್ತು ಆ ಕುದುರೆಯ ಫೋಟೋ ನನಗೆ ಬೇಕು. ಅದನ್ನು ನನ್ನ ಸ್ಕ್ರೀನ್​ ಸೇವರ್​ ಆಗಿರಿಸಿಕೊಳ್ಳುವೆ. ಅವಳೇ ನನ್ನ ಹೀರೋ ಅಂತಾ ಆನಂದ್ ಮಹಿಂದ್ರಾ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.