ಡೋರ್​ ಲಾಕ್ ಆಗಿ ಮನೆಯೊಳಗೆ ಸಿಲುಕಿದ್ದ ಬಾಲಕಿ ರಕ್ಷಣೆ ​

ಮಂಗಳೂರು: ಬಾಗಿಲು ಲಾಕ್​ ಆಗಿ ಒಳಗೆ ಸಿಲುಕಿದ್ದ 12 ವರ್ಷದ ಬಾಲಕಿಯನ್ನು ಅಗ್ನಿಶಾಮಕ‌ ಸಿಬ್ಬಂದಿ ರಕ್ಷಿಸಿದ್ದಾರೆ. ಬಿಜೈ ಚರ್ಚ್ ರಸ್ತೆಯ ಅಭಿಮಾನ್ ಮ್ಯಾನ್ಶನ್‌ ಅಪಾರ್ಟ್​​​ಮೆಂಟ್​ನಲ್ಲಿದ್ದ ತಮ್ಮ ಮನೆಯೊಳಗೆ ಬಾಲಕಿ ಬಾಗಿಲು ಹಾಕಿಕೊಂಡು ಮಲಗಿದ್ದಳು. ಆದರೆ ಮನೆಯಿಂದ ಹೊರ ತೆರಳಿದ್ದ ಪೋಷಕರು ಸಂಜೆ ಮರಳಿದಾಗ ಬಾಗಿಲು ಎಷ್ಟೇ ಪ್ರಯತ್ನಿಸಿದರೂ ತೆರೆಯಲಾಗಿಲ್ಲ. ಕೊನೆಗೆ ಪೋಷಕರು ಅಗ್ನಿಶಾಮಕ‌ ದಳದವರಿಗೆ ಸುದ್ದಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿ ಏಣಿಯ ಮೂಲಕ ಫ್ಲ್ಯಾಟ್​ನ 4ನೇ ಮಹಡಿ ಏರಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲ್ಕನಿ ಮೂಲಕ ಮನೆ ಪ್ರವೇಶಿಸಿ ಮೇನ್​ ಡೋರ್ ​ತೆರೆದು ಬಾಲಕಿಯನ್ನ ರಕ್ಷಣೆ ಮಾಡಿದರು.