ರೈಲಿನಿಂದ ಆಯತಪ್ಪಿ ಬಿದ್ದು ಯುವತಿ ಸಾವು

ಹಾಸನ: ರೈಲಿನಿಂದ ಆಯತಪ್ಪಿ ಬಿದ್ದು ಮಂಡ್ಯ ಜಿಲ್ಲೆ ಮೇಟಿಮೆಳ್ಳಲ್ಲಿ ಮೂಲದ ಯುವತಿ ಸಾವನ್ನಪ್ಪಿದ ಘಟನೆ,  ಜಿಲ್ಲೆಯ ಹಿರಿಸಾವೆ ರೈಲ್ವೆನಿಲ್ದಾಣದಲ್ಲಿ ನಡೆದಿದೆ.

ದಿವ್ಯಶ್ರೀ ಅಲಿಯಾಸ್​ ಮೇಘನಾ(21) ಮೃತ ಯುವತಿ.  ನಿನ್ನೆ ಶ್ರವಣಬೆಳಗೊಳದಿಂದ ಬೆಂಗಳೂರಿಗೆ ಬರುತ್ತಿರುವಾಗ ವೇಳೆ ರೈಲು ಹತ್ತಲು ಮುಂದಾಗಿದ್ದಾರೆ. ಈವೇಳೆ ಕಾಲು ಜಾರಿ ರೈಲು ಹಳಿ ಪಕ್ಕ ಬಿದ್ದಿದ್ದಾರೆ. ಘಟನೆಯಲ್ಲಿ ತಲೆಗೆ ತೀವ್ರ ಪಟ್ಟು ಬಿದ್ದಿದ್ದು, ಕೂಡಲೇ ಅವರನ್ನು ಬೆಳ್ಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಡಿಪ್ಲೊಮಾ ಮುಗಿಸಿ‌ ಖಾಸಗಿ ಕಂಪನಿಯಲ್ಲಿ ದಿವ್ಯಶ್ರೀ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.