ಮೈಗ್ರೇನ್​ಗೆ ಮನೆಯಲ್ಲೇ ಇದೆ ಸಿಂಪಲ್​ ಪರಿಹಾರ

ತಲೆನೋವು ಬಂದಾಗ ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಇನ್ನು ಮೈಗ್ರೇನ್​ ಇದ್ದಾಗಂತೂ ಹೇಳೋದೇ ಬೇಡ. ಮೈಗ್ರೇನ್​ ತುಂಬಾ ಸಮಯದವರೆಗೆ ಇರುತ್ತವೆ ಹಾಗೂ ಪದೇ ಪದೇ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸಾಧಾರಣ ನೋವಿದ್ದರೆ ಇನ್ನೂ ಕೆಲವೊಮ್ಮೆ ತೀವ್ರ ತಲೆನೋವು ಉಂಟಾಗಬಹುದು. ಪ್ರಕರವಾದ ಬೆಳಕು, ಕೆಲವೊಂದು ವಾಸನೆ ಅಥವಾ ಜೋರಾದ ಶಬ್ದದಿಂದ ಮೈಗ್ರೇನ್​ ಬರಬಹುದು. ಇದರಿಂದ ತಲೆಯ ಒಂದು ಭಾಗದಲ್ಲಿ ಮೈಗ್ರೇನ್​ ಕಾಣಿಸಿಕೊಂಡು ಇಡೀ ದಿನ ಅಥವಾ ಮೂರು ದಿನಗಳವರೆಗೆ ನೋವು ಇರುತ್ತದೆ. ತಲೆನೋವಿನ ಜೊತೆ ತಲೆ ಸುತ್ತು ಅಥವಾ ವಾಂತಿ ಕೂಡ ಉಂಟಾಗಬಹುದು. ಮೈಗ್ರೇನ್​ ಸಾಮಾನ್ಯವಾಗಿ ಅನುವಂಶಿಕವಾಗಿರುತ್ತದೆ. ಅಂದ್ರೆ ಕುಟುಂಬದಲ್ಲಿ ತಂದೆ ತಾಯಿಗೆ ಮೈಗ್ರೇನ್​ ಇದ್ದರೆ ಮಕ್ಕಳಲ್ಲಿಯೂ ಅದು ಕಾಣಿಸಿಕೊಳ್ಳುತ್ತದೆ. ಹಾಗಂತ ಎಲ್ಲಾ ತಲೆನೋವು ಮೈಗ್ರೇನ್​ ಅಲ್ಲ. ಮೈಗ್ರೇನ್​​ಗೆ ಇಂಥದ್ದೇ ನಿರ್ದಿಷ್ಟ ಕಾರಣಗಳಿಲ್ಲ.

ತಲೆಯ ರಕ್ತನಾಳಗಳು ಊದಿಕೊಳ್ಳುವುದು ಮತ್ತು ಕುಗ್ಗುವುದು ಹಾಗೂ ಮೆದುಳಿನ ಕೆಮಿಕಲ್ಸ್​ ಅಥವಾ ನ್ಯೂರೋಟ್ರಾನ್ಸ್​ಮಿಟರ್​​ನಲ್ಲಿನ ಬದಲಾವಣೆ ಮೈಗ್ರೇನ್​​ಗೆ ಪ್ರಮುಖ ಕಾರಣವಿರಬಹುದು ಎಂದು ಹೇಳಲಾಗುತ್ತದೆ. ಮೈಗ್ರೇನ್​​​ಗೆ ನಿಮ್ಮ ಮನೆಯಲ್ಲೇ ಸಿಗೋ ವಸ್ತುಗಳಿಂದ ಪರಿಹಾರ ಕಂಡುಕೊಳ್ಳೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಟಿಪ್ಸ್

1. ದ್ರಾಕ್ಷಾರಸ: ದ್ರಾಕ್ಷಾರಸ ಸೇವಿಸುವುದರಿಂದ ಮೈಗ್ರೇನ್​ ಕಡಿಮೆ ಮಾಡಿಕೊಳ್ಳಬಹುದು. ದ್ರಾಕ್ಷಾರಸ ತಯಾರಿಸಲು ನೀರಿನ ಜೊತೆಗೆ ತಾಜಾ ದ್ರಾಕ್ಷಿಯನ್ನ ಚೆನ್ನಾಗಿ ರುಬ್ಬಿ. ಈ ಮಿಶ್ರಣವನ್ನ  ದಿನಕ್ಕೆ 2 ಬಾರಿ ಸೇವಿಸಿ. ಇದರಲ್ಲಿರುವ  ಫೈಬರ್​, ವಿಟಮಿನ್ ಎ ಮತ್ತು ಸಿ, ಕಾರ್ಬೋಹೈಡ್ರೇಟ್​ಳು ಹಾಗೂ ಸಿಟ್ರಸ್ ಅಂಶವು  ಮೈಗ್ರೇನ್​ಗೆ ಪರಿಣಾಮಕಾರಿಯಾಗಿ ಪರಿಹಾರ ಒದಗಿಸುತ್ತದೆ.

2. ಶುಂಠಿ: ಒತ್ತಡ ಮತ್ತು ನೋವನ್ನು ನಿವಾರಿಸುವ ಶಕ್ತಿಯನ್ನ ಹೋಂದಿರುವ ಶುಂಠಿ , ಮೈಗ್ರೇನ್ ನೋವಿಗೂ ಪರಿಹಾರ ಒದಗಿಸುತ್ತದೆ. ಶುಂಠಿ ರಸಕ್ಕೆ ನಿಂಬೆ ರಸವನ್ನ ಬೆರೆಸಿ ಕುಡಿಯಿರಿ. ಅಥವಾ ಶುಂಠಿ ಟೀ ಸೇವಿಸುವುದರಿಂದ  ಮೈಗ್ರೇನ್​ನಿಂದ ಪರಿಹಾರ ಪಡೆಯಬಹುದು.

3. ಚಕ್ಕೆ: ಚಕ್ಕೆ ಕೇವಲ ನಿಮ್ಮ ಆಹಾರಕ್ಕೆ ಪರಿಮಳವನ್ನು ನೀಡುವುದಿಲ್ಲ. ಜೊತೆಗೆ ಮೈಗ್ರೇನ್​ಗೆ ​ಪರಿಣಾಮಕಾರಿ ಮನೆ  ಮದ್ದಾಗಿದೆ. ನೀರಿನಲ್ಲಿ ಚಕ್ಕೆ ಪುಡಿ ಬೆರೆಸಿ ಹಣೆಯ ಮೇಲೆ ಹಚ್ಚಿ 30 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ  ತೊಳೆಯುವುದರಿಂದ ಶೀಘ್ರವಾಗಿ ಪರಿಹಾರ ದೊರಕುತ್ತದೆ.

4. ಪ್ರಕಾಶಮಾನವಾದ ಬೆಳಕಿನಿಂದ ದೂರವಿರಿ: ಅತಿಯಾದ ಬೆಳಕು ನಿಮ್ಮ ಕಣ್ಣಿನ ಮೇಲೆ ಬಿದ್ದಾಗಲೂ ಕೂಡಾ ತಲೆ ನೋವು ಉಂಟಾಗಬಹುದು. ಅಥವಾ ನಿಮಗಿರುವ ನೋವನ್ನ ಹೆಚ್ಚು ಮಾಡಬಹುದು. ಆದ್ದರಿಂದ ಕಡಿಮೆ ಪ್ರಕಾಶಮಾನವಿರುವ ಲೈಟ್ಸ್​ ಬಳಸಿ ಅಥವಾ ಕನ್ನಡಕವನ್ನು ಧರಿಸಿ.

6.  ಹೆಡ್​ ಮಸಾಜ್
ಮೈಗ್ರೇನ್ ನೋವನ್ನು ನಿವಾರಿಸಲು ಸರಳ ಮಾರ್ಗವೆಂದರೆ  ಹೆಡ್​ ಮಸಾಜ್. ಇದು ರಕ್ತದ ಪರಿಚಲನೆ ಹೆಚ್ಚಿಸುತ್ತದೆ.  ನಿಧಾನವಾಗಿ ನಿಮ್ಮ ನೆತ್ತಿಯನ್ನು ಮಸಾಜ್​ ಮಾಡುವುದರಿಂದ ನೋವು ಕಡಿಮೆಯಾಗಿ ನಿಮಗೆ ವಿಶ್ರಾಂತಿ ನೀಡುತ್ತದೆ.  ಮೈಗ್ರೇನ್ ನೋವನ್ನ ಗುಣಪಡಿಸಲು ಈ ಸಿಂಪಲ್​ ಪರಿಹಾರಗಳು ಸಾಕು. ಆದರೆ ತಲೆನೋವಿನ ತೀವ್ರತೆ ಹೆಚ್ಚಿದಲ್ಲಿ  ತಡಮಾಡದೇ ವೈದ್ಯರನ್ನ ಭೇಟಿ ಮಾಡಿ