ಕನ್ನಡದ ಚಮಕ್ ಈಗ ಟಾಲಿವುಡ್​ನಲ್ಲಿ ‘ಗೀತಾ ಚಲೋ’.!

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ್ದ ‘ಚಮಕ್’ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಧಮಾಕ ಸೃಷ್ಟಿಸಿತ್ತು. ಸಿಂಪಲ್ ಸುನಿ ನಿರ್ದೇಶನವಿದ್ದ, ಈ ಚಿತ್ರ 2017ರಲ್ಲಿ ತೆರೆಕಂಡು ಬ್ಲಾಕ್ ಬಾಸ್ಟರ್​ ಚಿತ್ರವಾಗಿ ಹೆಸರು ಮಾಡಿತ್ತು. ಚಿತ್ರದಲ್ಲಿ ಗಣಿ ಹಾಗೂ ರಶ್ಮಿಕಾ ಕ್ಯೂಟ್​ ಲವ್​ ಸ್ಟೋರಿಗೆ ಪ್ರೇಕ್ಷಕ ಫುಲ್ ಫಿದಾ ಆಗಿದ್ರು. ಇದೀಗ ಅದೇ ಚಿತ್ರ ಮತ್ತೆ ಸದ್ದು ಮಾಡೋಕೆ ರೆಡಿಯಾಗ್ತಿದೆ. ಸ್ಯಾಂಡಲ್​ವುಡ್​ನಲ್ಲಿ ಅಲ್ಲ ಬದಲಾಗಿ ಟಾಲಿವುಡ್​ ಅಂಗಳದಲ್ಲಿ. ಹೌದು ಕನ್ನಡದ ಚಮಕ್ ಸಿನಿಮಾ ಇದೀಗ ತೆಲುಗಿನಲ್ಲಿ ‘ಗೀತಾ ಚಲೋ’ ಅನ್ನೊ ಟೈಟಲ್​ನಲ್ಲಿ ಡಬ್ ಆಗಿ ಭರ್ಜರಿ ಸೌಂಡ್ ಮಾಡೋಕೆ ರೆಡಿಯಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿದ್ದು ಗಣಿಯ 99 ಚಿತ್ರದ ಜೊತೆಯಲ್ಲೆ ಈ ಸಿನಿಮಾ ಕೂಡ ಏಪ್ರಿಲ್ 26 ಕ್ಕೆ ತೆರೆಗೆ ಬರಲಿದೆ.

ಗೀತಾ+ ಚಲೋ= ರಶ್ಮಿಕಾ..!
ಸದ್ಯ ಸ್ಯಾಂಡಲ್​ವುಡ್ ಸಿನಿಮಾಗಳು ಪರಭಾಷೆಯಲ್ಲೂ ಸದ್ದು ಮಾಡ್ತಿವೀ. ಇದೀಗ ಅದರ ಸಾಲಿಗೆ ಚಮಕ್ ಸಿನಿಮಾ ಕೂಡ ಒಂದು. ವಿಶೇಷ ಅಂದ್ರೆ ‘ಚಲೋ’ ಅನ್ನೋ ಚಿತ್ರದ ಮೂಲಕ ರಶ್ಮಿಕಾ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ರು. ಬಳಿಕ ವಿಜಯ್ ದೇವರಕೊಂಡ ಜೊತೆ ‘ಗೀತಾ ಗೋವಿಂದಂ’ ಚಿತ್ರದಲ್ಲಿ ಕಮಾಲ್ ಮಾಡಿದ್ರು. ಇದೀಗ ಎರಡೂ ಚಿತ್ರಗಳು ಟೈಟಲ್ ಸೇರಿಸಿ ತೆಲುಗಿನಲ್ಲಿ ’ಗೀತಾ ಚಲೋ’ ಅಂತಾ ಶೀರ್ಷಿಕೆ ಇಟ್ಟಿರೋದು ವಿಶೇಷ. ಸದ್ಯ ಸ್ಯಾಂಡಲ್​ವುಡ್​ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲೂ ರಶ್ಮಿಕಾ ಮಿಂಚುತ್ತಿದ್ದಾರೆ. ಸದ್ಯ ಡಿಯರ್ ಕಾಮ್ರೇಡ್, ಚಿತ್ರ ಸೇರದಂತೆ ತಮಿಳಿನ ಕಾರ್ತಿ ಜೊತೆಯಲ್ಲೂ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಒಟ್ಟಾರೆ ಹಾಡಿನಿಂದಲೇ ಮನತಣಿಸಿದ್ದ ಕನ್ನಡದ ಚಮಕ್ ಈಗ ತಮಿಳಿನಲ್ಲೂ ಬರ್ತಿರೋದು ಸಂಸಸ ತಂದಿದೆ. ವಿಶೇಷ ಅಂದ್ರೆ ಇದೇ ಚಿತ್ರದ ಜೊತೆ ಗಣಿಯ 99 ಚಿತ್ರ ಕೂಡ ತೆರೆಕಾಣ್ತಾಯಿರೋದು ಮತ್ತೊಂದು ವಿಶೇಷ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv