ಗೌತಮ್​ ಗಂಭೀರ್​​ಗೆ ಸಿಕ್ತು ದೆಹಲಿ ಪೂರ್ವ ಕ್ಷೇತ್ರದ ಬಿಜೆಪಿ ಟಿಕೆಟ್​​

ನವದೆಹಲಿ: ನಿವೃತ್ತ ಅಂತಾರಾಷ್ಟ್ರೀಯ ಕ್ರಿಕೆಟರ್ ಗೌತಮ್​ ಗಂಭೀರ್ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ​ಸ್ಪರ್ಧಿಸಲಿದ್ದಾರೆ. ​ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಇಂದು ಪೂರ್ವ ದೆಹಲಿ  ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪ್ರಕಟಿಸಿದೆ. ಕೆಲ ತಿಂಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಕ್ರಿಟೆಕರ್ ಗೌತಮ್​ ಗಂಭೀರ್​ಗೆ ಟಿಕೆಟ್​ ನೀಡಿದೆ. ಪೂರ್ವ ದೆಹಲಿಯಿಂದ ಗಂಭೀರ್​ ಸ್ಪರ್ಧಿಸಲಿದ್ದಾರೆ. ​ಇದೇ ವೇಳೆ, ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಅವರಿಗೂ ನವದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್​ ನೀಡಲಾಗಿದೆ.