ಜೈಲಿನಲ್ಲೇ ಶುರುವಾಗುತ್ತೆ ಗೋ ಶಾಲೆಗಳು..!

ಲಖನೌ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಜೈಲಿನಲ್ಲಿ ಗೋಶಾಲೆಗಳನ್ನು ತೆರೆಯುವ ನಿರ್ಧಾರ ಕೈಗೊಂಡಿದೆ. ರಾಜ್ಯದ 12 ಜಿಲ್ಲೆಗಳಲ್ಲಿನ ಜೈಲುಗಳಲ್ಲಿ ಗೋಶಾಲೆಗಳನ್ನು ಆರಂಭಿಸುವುದಕ್ಕಾಗಿ ಸುಮಾರು 2 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದಾರೆ.ಇದಕ್ಕೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ರೂ, ಹಲವು ಹಿಂದೂ ಸಂಘಟನೆಗಳು ಈ ನಡೆಯನ್ನ ಸ್ವಾಗತಿಸಿವೆ.

ಜೈಲಿನಲ್ಲಿ ಕೈದಿಗಳು ಖಾಲಿ ಕುಳಿತಿರುವ ಬದಲು ಹಸುಗಳನ್ನ ಸಾಕಿದರೆ, ಅವರ ಆಲೋಚೆಗಳೂ ಶುದ್ಧವಾಗುತ್ತವೆ, ಸರಿಯಾದ ದಿಕ್ಕಿನಲ್ಲಿರುತ್ತವೆ ಅಂತ ರಾಮ ಜನ್ಮ ಭೂಮಿ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲ್ ದಾಸ್ ಜಿ ಮಹಾರಾಜ್ ಹೇಳಿದ್ದಾರೆ.

ಕಳೆದ ವರ್ಷ ಗೋ ಸೇವಾ ಆಯೋಗ ರಾಜ್ಯದ ಜೈಲು ಆಡಳಿತ ಮತ್ತು ಸುಧಾರಣೆ ಸೇವಾ ನಿಗಮಕ್ಕೆ ಗೋಶಾಲೆಗಳನ್ನು ಸ್ಥಾಪಿಸಲು ಜೈಲುಗಳ ಪಟ್ಟಿಯನ್ನು ಕೇಳಿತ್ತು. ಈ ಆದೇಶದಂತೆ 12 ಜೈಲುಗಳನ್ನ ಆಯ್ಕೆ ಮಾಡಲಾಗಿದ್ದು, ಗೋರಖ್​ಪುರ, ಸುಲ್ತಾನ್​ಪುರ್, ಆಗ್ರಾ, ಬರಾಬಂಕಿ, ಸೀತಾಪುರ್, ಮೀರತ್, ಕಾನ್ಪುರ್ ದೆಹತ್, ಬಲರಾಮ್​ಪುರ್ ಮತ್ತು ರಾಯ್​ಬರೇಲಿ ಸೇರಿದಂತೆ 12 ಜಿಲ್ಲೆಗಳ ಜೈಲುಗಳಲ್ಲಿ ಗೋಶಾಲೆ ತೆರೆಯಲು ನಿರ್ಧರಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv