ಗೌರಿ ಹತ್ಯೆ ಪ್ರಕರಣ: ಆರೋಪಿ ಪರಶುರಾಮ್ 14 ದಿನಗಳ ಕಾಲ ಕಸ್ಟಡಿಗೆ

ಬೆಂಗಳೂರು: ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಶುರಾಮ್‌ ನನ್ನ  ಕೋರ್ಟ್ 14 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿದೆ. 3 ನೇ ಎಸಿಎಂಎಂ ಕೋರ್ಟ್ ನಿಂದ ಆದೇಶ ಹೊರಡಿಸಲಾಗಿದೆ.

ಗೌರಿಯವರನ್ನ ಇವನೇ ಕೊಂದಿರುವ ಶಂಕೆ ಮೇಲೆ ವಶಕ್ಕೆ ಪಡೆಯಲಾಗಿದ್ದು, ಈ ಹಿಂದೆ ಇವನೇ ಗೌರಿಗೆ ಗುಂಡಿಕ್ಕಿದ್ದಾನೆಂದು ಎಸ್ಐಟಿ ಹೇಳಿತ್ತು. ಹೆಚ್ಚಿನ ವಿಚಾರಣೆಗೆ 14 ದಿನಗಳ ಕಾಲ ಕಸ್ಟಡಿಗೆ ಎಸ್ಐಟಿ ಮನವಿ ಮಾಡಿತ್ತು. ಸದ್ಯ 14 ದಿನ ಕಸ್ಟಡಿಗೆ ಕೋರ್ಟ್ ನೀಡಿದೆ.

ಎಸ್‌ಐಟಿ ಅಧಿಕಾರಿಗಳು ಸಿಂಧಗಿಯಲ್ಲಿ ಬಂಧಿಸಿ ಇಂದು ಕೋರ್ಟ್‌ ಮುಂದೆ ಹಾಜರು ಪಡಿಸಿದ್ದರು. ವಕೀಲರ ನೇಮಕಕ್ಕೆ ಪರುಶುರಾಮ್‌ನನ್ನ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ವಕೀಲರನ್ನ ತಾನೇ ನೇಮಿಸಿಕೊಳ್ಳುವುದಾಗಿ ಪರಶುರಾಮ್ ಹೇಳಿದ್ದಾನೆ. ಎಸ್‌ಐಟಿ ಜೂನ್ ಹತ್ತರಂದು ಇಬ್ಬರನ್ನ ವಶಕ್ಕೆ ಪಡೆದಿತ್ತು.
ಸಿಂಧಗಿಯಲ್ಲಿ ಪರಶುರಾಮ್ ಮತ್ತು ಅನಿಲ್ ಅಗಸರನನ್ನ ವಶಕ್ಕೆ ಪಡೆದಿತ್ತು. ಇಂದು ಅರೆಸ್ಟ್ ತೋರಿಸಿ ಆರೋಪಿಯನ್ನ ಕೋರ್ಟ್‌ಗೆ ಹಾಜರು ಪಡಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv