ಗೌರಿ ಹತ್ಯೆ ಪ್ರಕರಣ: ಎಸ್​​ಐಟಿ ತನಿಖೆಗೆ ಹಾಜರಾಗಲು ಪರಶುರಾಮ್​ ಪೋಷಕರು ನಕಾರ..!

ವಿಜಯಪುರ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊನ್ನೆ ವಿಶೇಷ ತನಿಖಾ ತಂಡ ಸಿಂದಗಿಯ ಪರಶುರಾಮ ವಾಗ್ಮೊರೆ ಎನ್ನುವ ಆರೋಪಿಯನ್ನು ಬಂಧಿಸಿತ್ತು.

ಈ ಸಂಬಂಧ ಎಸ್​ಐಟಿ ನಿನ್ನೆ ಆರೋಪಿಯ ಪೋಷಕರನ್ನು ವಿಚಾರಣೆಗಾಗಿ ಬೆಂಗಳೂರಿಗೆ ಬರುವಂತೆ ತಾಕೀತು ಮಾಡಿದೆ ಎನ್ನಲಾಗಿದೆ. ಆದರೆ, ಪರಶುರಾಮ ವಾಗ್ಮೊರೆ ಪೋಷಕರಿಗೆ ಬೆಂಗಳೂರಿಗೆ ತೆರಳಲು ಆರ್ಥಿಕ ತೊಂದರೆ ಎದುರಾಗಿದೆ. ಮೇಲಾಗಿ ಪರಶುರಾಮ್​ ತಾಯಿ ಜಾನಕಿಬಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬೆಂಗಳೂರಿಗೆ ತೆರಳುವುದು ಅಸಾಧ್ಯವೆಂದು ಕುಟುಂಬದ ಮೂಲಗಳು ತಿಳಿಸಿವೆ. ಪರಶುರಾಮ ವಾಗ್ಮೊರೆ ಬಂಧಿಸಿದ ಬಳಿಕ ಜೂನ್ 12ರಂದು ಸಹ ಬೆಂಗಳೂರಿಗೆ ಬರಲು ಪೋಷಕರಿಗೆ ಎಸ್​ಐಟಿ ಸೂಚಿಸಿತ್ತು. ಆದರೆ ಪರಶುರಾಮ ವಾಗ್ಮೊರೆ ಬಂಧನ ಸುದ್ದಿ ಬಹಿರಂಗವಾದ ಕಾರಣ ಬೆಂಗಳೂರಿಗೆ ತೆರಳಲು ಹಿಂಜರಿದಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv