ಗೌರಿ ಹತ್ಯೆ ಪ್ರಕರಣ; ಆರೋಪಿಗಳಿಂದ ಜಾಮೀನು ಅರ್ಜಿ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೋಲ್ ಕಾಳೆ ಸೇರಿ 16 ಆರೋಪಿಗಳು ಸಿಟಿ ಸಿವಿಲ್ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಆರೋಪಿಯು ನ್ಯಾಯಾಂಗ‌‌ ಬಂಧನದಲ್ಲಿದ್ದಾಗ 90 – 60 ದಿನಗಳಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಬೇಕು. ಆದ್ರೆ, ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳು ನಿಗದಿತ ಸಮಯದಲ್ಲಿ ಚಾರ್ಚ್ ಶೀಟ್ ಸಲ್ಲಿಸಿಲ್ಲ. ಅಲ್ಲದೇ, ಚಾರ್ಚ್ ಶೀಟ್ ಸಲ್ಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ. CRPC ಸೆಕ್ಷನ್ 167(2) ಅಡಿ ಚಾರ್ಚ್ ಶೀಟ್ ಸಲ್ಲಿಸಲು ವಿಳಂಬವಾದರೆ ಜಾಮೀನು ನೀಡಬೇಕು ಅಂತಾ ಅರೋಪಿಗಳ ಪರ ವಕೀಲ ಪಿ. ಕೃಷ್ಣಮೂರ್ತಿ ನ್ಯಾಯಾಧೀಶ ಶಿವಶಂಕರ್ ಅಮರಣ್ಣನವರ್ ಪೀಠದಲ್ಲಿ ಮನವಿ ಮಾಡಿದ್ರು. ಆರೋಪಿಗಳ ಪರ ವಕೀಲರ ಮನವಿಗೆ ಎಸ್ಐಟಿ ಪರ ವಕೀಲ ಬಾಲನ್ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದ್ರು. ಅಕ್ಷೇಪಣೆಗೆ ಕಾಲಾವಕಾಶ ನೀಡಿದ ನ್ಯಾಯಾಧೀಶರು ವಿಚಾರಣೆಯನ್ನು ಜನವರಿ 25 ಕ್ಕೆ ಮುಂದೂಡಿದರು.