ಪತ್ರಕರ್ತೆ ಗೌರಿ ಹತ್ಯೆ: 17ನೇ ಆರೋಪಿಯನ್ನ ವಶಕ್ಕೆ ಪಡೆದ SIT

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿಯನ್ನ ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಮೂಲದ ವಾಸುದೇವ ಎಂಬುವವರನ್ನು ಎಸ್​ಐಟಿ ವಶಕ್ಕೆ ಪಡೆದಿದೆ. ಕೆಲವು ದಿನಗಳ ಹಿಂದೆ ಬೇರೊಂದು ಪ್ರಕರಣದಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು ಈತನನ್ನು ಬಂಧಿಸಿದ್ದರು.

ಇದೀಗ ಬಾಡಿ ವಾರೆಂಟ್ ಮೂಲಕ ಮಹಾರಾಷ್ಟ್ರದಿಂದ ಎಸ್ಐಟಿ ಅಧಿಕಾರಿಗಳು ಆತನನ್ನು ಕರೆತಂದಿದ್ದಾರೆ. ಇದೀಗ ವಾಸುದೇವ್, ಗೌರಿ ಹತ್ಯೆ ಪ್ರಕರಣದ 17ನೆಯ ಆರೋಪಿ. ವಾಸುದೇವ್ ಮೇಲೆ, ಹತ್ಯೆಗೆ ಬಳಸಿದ್ದ ಬೈಕ್ ನೀಡಿರುವ ಆರೋಪ ಇದೆ. ಹತ್ಯೆಗೆ ಬಳಸಲಾಗಿದೆ ಅನ್ನೋ ಬೈಕ್​​ ಅನ್ನ ವಾಸುದೇವ್ ಕರ್ನಾಟಕದಲ್ಲಿ ಕದ್ದು, ಕೊಲೆ ಆರೋಪಿಗಳಿಗೆ ನೀಡಿದ್ದಾನೆ ಎನ್ನಲಾಗಿದೆ. ಸದ್ಯ ವಶಕ್ಕೆ ಪಡೆದಿರುವ ಎಸ್​ಐಟಿ, ಕೋರ್ಟ್​ಗೆ ಹಾಜರುಪಡಿಸಿ, ಆರೋಪಿಯನ್ನು 14 ದಿನಗಳ‌ ಕಾಲ ತನ್ನ ವಶಕ್ಕೆ ಪಡೆದಿದೆ.