ಗೌರಿ ಹತ್ಯೆ ಆರೋಪಿ ಪರಶುರಾಮ್ ವಾಗ್ಮೋರೆ ಯಾರು..?

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ತಂಡವು ಪರಶುರಾಮ್ ಎಂಬ ಮತ್ತೊಬ್ಬ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದೆ. ಈತ ವಿಜಯಪುರ ಜಿಲ್ಲೆ ಸಿಂದಗಿ ಮೂಲದವ. ಎಸ್‌ಐಟಿ ವಿಚಾರಣೆ ವೇಳೆ ಈತ ಗೌರಿ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

26 ವರ್ಷ ವಯಸ್ಸಿನ ಪರಶುರಾಮ್ ವಾಗ್ಮೋರೆ ಯಾರು..?
ಸಿಂದಗಿಯ ಅಶೋಕ್​ ವಾಗ್ಮೋರೆ​ ಅವರ ಪುತ್ರ ಪರಶುರಾಮ್ ವಾಗ್ಮೋರೆ​ ಹಿಂದೂ ಸಂಘಟನೆಯ ಕಾರ್ಯಕರ್ತ. 2012ರಲ್ಲಿ ಸಿಂದಗಿ ತಾಲೂಕು ಕಚೇರಿ ಬಳಿ ಪಾಕಿಸ್ತಾನದ ಬಾವುಟ ಹಾರಿಸಿದ್ದ. ಬಾವುಟ ಹಾರಿಸಿದ ಪ್ರಕರಣದಲ್ಲಿ ಪರಶುರಾಮ್​ ಕೂಡ ಒಬ್ಬ ಆರೋಪಿಯಾಗಿದ್ದ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv