ಗ್ಯಾಸ್ ಪೈಪ್​ಲೈನ್​ಗೆ ಹಾನಿ, ಸರ್ಜಾಪುರ ರಸ್ತೆಯಲ್ಲಿ 1.5 ಕಿಮೀ ಟ್ರಾಫಿಕ್​ ಜಾಮ್..!​​

ಬೆಂಗಳೂರು: ನಗರದ ಸರ್ಜಾಪುರ ರಸ್ತೆ ಬಳಿ ಮತ್ತೆ ಗ್ಯಾಸ್ ಪೈಪ್​ಲೈನ್ ಹಾನಿಯಾಗಿ ಒಂದೂವರೆ ಕಿಲೋಮೀಟರ್ ನಷ್ಟು ಟ್ರಾಫಿಕ್ ಜಾಮ್​ ಉಂಟಾಗಿದೆ. ಸರ್ಜಾಪುರ ರಸ್ತೆಯ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಜಾಮ್​ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು. ಟ್ರಾಫಿಕ್​ ಪೊಲೀಸರು ವಾಹನದಟ್ಟಣೆಯನ್ನು ನಿಯಂತ್ರಿಸುತ್ತಿದ್ದಾರೆ.