’ಗರಿಮಾ ಹೋಮ್ಸ್ ಆ್ಯಂಡ್‌ ಫಾರ್ಮ್ ಹೌಸಸ್ ಕಂಪನಿ ಹಾಕಿದ ಪಂಗನಾಮ’

ಹುಬ್ಬಳ್ಳಿ : ಗರಿಮಾ ಹೋಮ್ಸ್ ಆ್ಯಂಡ್‌ ಫಾರ್ಮ್ ಹೌಸಸ್ ಕಂಪನಿ ನಿವೇಶನ ನೀಡುವದಾಗಿ ಹೇಳಿ ಕೋಟ್ಯಾಂತರ ರೂಪಾಯಿಗಳನ್ನು ಪಂಗನಾಮ ಹಾಕಿರೋ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಮೋಸಕ್ಕೊಳಗಾದ ಗುತ್ತಿಗೆದಾರ ಸಿ.ವಿ.ಹಿರೇಮಠ ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಸ್ಥೆ ಹಲವಾರು ಸುಳ್ಳು ಭರವಸೆ ನೀಡಿ ಮೋಸ ಮಾಡಿದ್ದು, ಅಭಿವೃದ್ಧಿ ಹೊಂದಿದ ಪ್ರದೇಶದದಲ್ಲಿ ನಿವೇಶನ ನೀಡುವುದಾಗಿ ಸಹ ಭರವಸೆ ನೀಡಿದ್ದರು. ಜನರಿಂದ ಈಗ ಕೋಟ್ಯಾಂತರ ರೂಪಾಯಿ ಹಣ ಪಡೆದು ಮುಗ್ಧ ಜನತೆಗೆ ಪಂಗನಾಮ ಹಾಕಿದ್ದಾರೆ ಎಂದು ಆರೋಪಿಸಿದರು.
ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯ ಸುಮಾರು ಎರಡು ಸಾವಿರ ಜನರಿಂದ 100 ಕೋಟಿಯಷ್ಟು ಹಣ ಪಡೆದು ಕಂಪನಿ ಮುಚ್ಚಿಕೊಂಡು ಹೋಗಿದ್ದಾರೆ. ರಾಜಸ್ತಾನ ಮೂಲದ ಬನವಾರಿಯಾಲ್ ಖುಷ್ವಾ ಹಾಗೂ ಪರಿಮಳ, ಹಾಗೂ ಸಿದ್ದಪ್ಪಾ ಬಾಬುರಾವ್ ಬಿರಾದಾರ ಸೇರಿದಂತೆ ಹಲವಾರು ಗೋಲ್ ಮಾಲ್ ಮಾಡಿರುವ ಆರೋಪಿಗಳಾಗಿದ್ದಾರೆ. ಹುಬ್ಬಳ್ಳಿಯ ‌ದೇಶಪಾಂಡೆ ನಗರದಲ್ಲಿ 2011 ರಿಂದ 2018 ಮಾರ್ಚ್ ವರೆಗೂ ಕಾರ್ಯನಿರ್ವಹಿಸಿ ಮಾರ್ಚ ತಿಂಗಳಲ್ಲಿ ಏಕಾಏಕಿ ಬಂದ್ ಮಾಡಿಕೊಂಡು‌ ಓಡಿ ಹೋಗಿದ್ದಾರೆ.‌ ವಂಚನೆ ಒಳಗಾದವರು ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv