ಗಾಂಜಾ ಮಾರಾಟಗಾರರ ಬಂಧನ

ಮಂಗಳೂರು: ಕಾಲೇಜ್ ಕ್ಯಾಂಪಸ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಮೂವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಅಬೂಬಕರ್ ಸಿದ್ದಿಕ್, ಮಹಮ್ಮದ್ ರಫೀಕ್, ಅಜೀದ್ ಬಂಧಿತರು.

ಆರೋಪಿಗಳು, ಮಂಗಳೂರಿನಿಂದ ರಿಕ್ಷಾದಲ್ಲಿ ಗಾಂಜಾ ತಂದು ಉಪ್ಪಿನಂಗಡಿ ಕಾಲೇಜು ಸಮೀಪ ವ್ಯಕ್ತಿಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿದ್ದ ಸುಮಾರು 4 ಕೆಜಿ ಗಾಂಜಾ, ಒಂದು ಬೈಕ್ ಹಾಗೂ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.