ಹಕ್ಕು ಚಲಾಯಿಸಿದ್ರು ಗಂಗಾವತಿ ಬೀಚಿ

ಕೊಪ್ಪಳ: ಈಶಾನ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್​ ಚುನಾವಣೆ ನಡೆಯುತ್ತಿದ್ದು, ಮತದಾನ ನಡೀತಿದೆ. ಗಂಗಾವತಿ ಬೀಚಿ ಖ್ಯಾತಿಯ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್​​ ಅವರು ಕೊಪ್ಪಳದಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಗಂಗಾವತಿಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಪ್ರಾಣೇಶ್ ಮತ ಚಲಾಯಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಈಶಾನ್ಯ ಪದವೀಧರ ಕ್ಷೇತ್ರದ  ಪರಿಷತ್​ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈಶಾನ್ಯ ಪದವೀಧರ ಕ್ಷೇತ್ರವು ರಾಜ್ಯದಲ್ಲಿಯೇ ದೊಡ್ಡ ಕ್ಷೇತ್ರವಾಗಿದ್ದು, ದಾವಣಗೆರೆಯ ಹರಪ್ಪನಹಳ್ಳಿ ಸೇರಿದಂತೆ ಹೈದ್ರಾಬಾದ್​ ಕರ್ನಾಟಕದ ಜಿಲ್ಲೆಗಳನ್ನು ಒಳಗೊಂಡಿದೆ.