ಮೂವರು ‘ಗೀತಾ’ರಲ್ಲಿ ಗಣೇಶ್​ಗೆ ಯಾರ ಮೇಲೆ ಲವ್​..?

ಗೋಲ್ಡನ್​ ಸ್ಟಾರ್​ ಗಣೇಶ್​ ಅತ್ತರೂ ಚಂದ, ನಕ್ಕರೂ ಚಂದ, ಗಣೇಶ್​​ರ ಮುದ್ದಾದ ನಗುವಿಗೆ ಎಷ್ಟು ಫ್ಯಾನ್ಸ್​ ಇದ್ದಾರೋ, ಕಣ್ಣೀರು ಬಂದರೂ ಕಾಣದ ಹಾಗೆ ನಟಿಸೋ ಅವ್ರ ಅಳುವಿಗೂ ಅಷ್ಟೆ ಫ್ಯಾನ್ಸ್​ ಇದ್ದಾರೆ. ಈ ನಗು ಅಳುವಿನ ಫಾರ್ಮುಲಾ ಇಟ್ಟಕೊಂಡೇ ಮಾಡಿರೋ ಅವ್ರ ಮುಂದಿನ ಸಿನಿಮಾ ಗೀತಾದ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಗೀತಾ ಅನ್ನೋ ಟೈಟಲ್ ಕನ್ನಡದ ಆಲ್​ಟೈಮ್​ ಗೋಲ್ಡನ್​ ಹಿಟ್ ಸಿನಿಮಾಗಳಲ್ಲಿ ಒಂದು. ಇದೇ ಟೈಟಲ್​ನಲ್ಲಿ ಬರ್ತಾ ಇರೋ ಸಿನಿಮಾವನ್ನ ಅಷ್ಟೆ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಜಯ್ ನಾಗೇಂದ್ರ. ವಿಜಯ್​ ನಾಗೇಂದ್ರ ಈ ಮೊದಲು ಮಿಸ್ಟರ್ & ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಚಿತ್ರದ ಸಹ ನಿರ್ದೇಶಕರು ಮತ್ತು ಸಂಭಾಷಣೆಕಾರರಾಗಿ ಕೆಲಸ ಮಾಡಿದ್ರು. ಈ ಸಿನಿಮಾದಲ್ಲಿ ಗಣೇಶ್​ಗೆ ಮೂವರು ನಾಯಕಿಯರು. ಈ ಮೂವರಲ್ಲಿ ಯಾರು ಗೀತಾ. ಯಾರನ್ನ ಗಣೇಶ್​ ಇಷ್ಟಪಡ್ತಾರೆ ಅನ್ನೋದು ಸದ್ಯದ ಕುತೂಹಲ.
ದೇಶದಲ್ಲೆಲ್ಲಾ ಶೂಟಿಂಗ್​, ಎಮೋಷನ್​ಗಳ ಪೇಂಟಿಂಗ್​
ಮುಗುಳುನಗೆ ನಿರ್ಮಾಪಕರಾದ ಸೈಯದ್ ಸಲಾಂ ಮತ್ತು ಶಿಲ್ಪಾ ಗಣೇಶ್ ಜಂಟಿಯಾಗಿ ತಮ್ಮ ಎಸ್ ಎಸ್ ಫಿಲ್ಮ್ ಮತ್ತು ಗೋಲ್ಡನ್ ಮೂವೀಸ್ ಅಡಿಯಲ್ಲಿ ನಿರ್ಮಿಸ್ತಾ ಇರೋ ಸಿನಿಮಾ ಗೀತಾ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮನಾಲಿ ,ಕೊಲ್ಕತ್ತಾ, ಮೈಸೂರು , ಹೈದರಾಬಾದ್, ಬೆಂಗಳೂರು ಮತ್ತು ಇನ್ನಿತರ ಸ್ಥಳಗಳಲ್ಲಿ ನಡೆದಿದ್ದು, ಮುಕ್ತಾಯವಾಗಿದೆ. ಇನ್ನೂ 2 ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಗಣೇಶ್​ಗೆ ಜೋಡಿಯಾಗಿ ಶಾನ್ವಿ ಶ್ರೀವತ್ಸಾ, ಪಾರ್ವತಿ, ಪ್ರಯಾಗ ಮಾರ್ಟಿನ್ ನಟಿಸಿದ್ದಾರೆ. ಗಣಿ ತಾಯಿ ಪತ್ರದಲ್ಲಿ ಸುಧಾರಾಣಿ ನಟಿಸಿದ್ರೆ, ಇನ್ನುಳಿದ ಪಾತ್ರಗಳಲ್ಲಿ ದೇವರಾಜ್, ಅಚ್ಯುತ್​ ಕುಮಾರ್​, ರಂಗಾಯಣ ರಘು ಮತ್ತು ಇನ್ನಿತರರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನೂಪ್​ ರುಬೆನ್ಸ್​ ಮ್ಯೂಸಿಕ್​ ಕಂಪೋಸ್​ ಮಾಡಿದ್ದು, ಶ್ರೀಶ ಕುದುವಳ್ಳಿ ಕ್ಯಾಮರಾ ವರ್ಕ್​ ಇದೆ.