ಇದೂ ಎಟಿಎಂ, ಆದ್ರೆ ಇದ್ರಲ್ಲಿ ಹಣ ಡ್ರಾ ಮಾಡೋಕೇ ಆಗಲ್ಲ..!

ಪುಣೆ: ಎಟಿಎಂ ಅಂದ್ರೆ ಏನು ಅಂತ ಕೇಳಿದ್ರೆ ಎಲ್ಲರೂ ಥಟ್ ಅಂತ ಆಟೋಮೆಟೆಡ್ ಟೆಲ್ಲರ್ ಮಷಿನ್ ಎಂದು ಹೇಳಿಬಿಡ್ತಾರೆ. ಇನ್ನು ಕೆಲವರು ಎನಿ ಟೈಮ್ ಮನಿ ಅಂತಾನೂ ಹೇಳ್ತಾರೆ. ಆದ್ರೆ ಪುಣೆಯಲ್ಲಿ ಒಂದು ಮಷಿನ್ ಇದೆ. ಅದು ಕೂಡ ಎಟಿಎಂ, ಆದ್ರೆ ಎನಿ​ ಟೈಮ್ ಮನಿ ಅಲ್ಲ ಎನಿ​ ಟೈಮ್ ಮೋದಕ ಮಷಿನ್.

ಗಣೇಶ ಚುತುರ್ಥಿಗೆ ವಿಶೇಷವಾಗಿ ಇಂಥದೊಂದು ಮಷಿನ್ ಪುಣೆಯ ಸಹಕಾರ್ ನಗರದಲ್ಲಿ ಅಳವಡಿಸಲಾಗಿದೆ. ಸಂಜೀವ್​ ಕುಲಕರ್ಣಿ ಅನ್ನೋರು ಈ ವಿಶೇಷ ಮಷಿನ್​ನ ವಿನ್ಯಾಸಕರಾಗಿದ್ದು, ನಾವು ತಯಾರಿಸಿರೋ ವಿಶೇಷ ಕಾರ್ಡ್​ ಮಷಿನ್​ನಲ್ಲಿ ಇನ್​ಸರ್ಟ್​ ಮಾಡುವ ಮೂಲಕ ನೀವು ಮೋದಕವನ್ನ ಪಡೆಯಬಹುದು. ಬದಲಾದ ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕಾಗುತ್ತದೆ. ಹೀಗಾಗಿ ಇಂತಹ ವಿಶೇಷ ಮಷಿನ್ ಕಂಡು ಹಿಡಿಯಲಾಗಿದೆ.

ಮಷಿನ್​ನಲ್ಲಿ ಮೋದಕಗಳನ್ನ ನೀಟಾಗಿ ಪ್ಯಾಕ್​ ಮಾಡಿ ಇಡಲಾಗಿದೆ. ನೀವು ಮಷಿನ್​ನಲ್ಲಿ ಕಾರ್ಡ್​ ಹಾಕಿದಾಗ ಪಿನ್ ನಂಬರ್ ಬದಲು ವಿಶೇಷ ಶಬ್ದಗಳು ಮುಂದಿರುತ್ತವೆ. ಉದಾಹರಣೆಗೆ ಕ್ಷಮೆ, ಶ್ರದ್ಧೆ, ವಿಶ್ವಾಸ, ಶಾಂತಿ, ಜ್ಞಾನ ಹಾಗೂ ದಾನ ಎಂಬ ಅಕ್ಷರಗಳನ್ನು ಬರೆಯಲಾಗಿದೆ ಅಂತ ಸಂಜೀವ್​ ಹೇಳುತ್ತಾರೆ. ಸದ್ಯ ಪುಣೆಯಲ್ಲಿ ಗಣೇಶ ಎಟಿಎಂ ಭಾರಿ ಸದ್ದು ಮಾಡ್ತಿದ್ದು ಜನರ ಸೆಂಟರ್ ಆಫ್​ ಅಟ್ರ್ಯಾಕ್ಷನ್ ಆಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tvs