ಗೋಲ್ಡನ್​ ಸ್ಟಾರ್​ ಇಂಡಸ್ಟ್ರಿಗೆ ಬಂದು 13 ವರ್ಷ..!

ಖಾಸಗಿ ವಾಹಿನಿಯ ಪಾಪ್ಯುಲರ್​ ಕಾಮಿಡಿ ಟೈಮ್​ನಿಂದ ಮನೆ ಮಾತಾಗಿ, ಈಗ ಗೋಲ್ಡನ್​ ಸ್ಟಾರ್​ ಆಗಿ ಕನ್ನಡದ ಬೇಡಿಕೆಯ ನಟನಾಗಿರೋ ಗಣೇಶ್​ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು 13 ವರ್ಷ ಆಗಿದೆ. 2006 ಏಪ್ರಿಲ್​ 21ನೇ ತಾರೀಖು ಗಣೇಶ್​ ಅಭಿನಯದ ಚೊಚ್ಚಲ ಚಿತ್ರ ಚೆಲ್ಲಾಟ ಸಿನಿಮಾ ತೆರೆಕಂಡಿತ್ತು. ಬರೀ ಕಾಮಿಡಿ ಟೈಮ್​ ಗಣೇಶನ ಸಿನಿಮಾ ಅಂತ ಥಿಯೇಟರ್​ಗೆ ಬಂದ ಜನ, ನಂತ್ರ ಸಿನಿಮಾ ಇಷ್ಟವಾಗಿ ಗಣೇಶ್​ ಮತ್ತೊಂದು ಸಿನಿಮಾ ಮಾಡಲು ಸ್ಪೂರ್ತಿಯಾದರೂ. ಇದಾದ ನಂತ್ರ ಮುಂಗಾರುಮಳೆಯಲ್ಲಿ ಗಣೇಶ್​ ಕಾಣಿಸಿಕೊಂಡ್ರು, ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಯುಗವನ್ನೇ ಸೃಷ್ಟಿ ಮಾಡ್ತು, ಗಣೇಶ್​​ರನ್ನ ನೋಡ ನೋಡ್ತಾನೆ ಸೂಪರ್​ ಸ್ಟಾರ್​ ಮಾಡಿ ಬಿಡ್ತು. ಈಗ ಕನ್ನಡದಲ್ಲಿ 30 ಸಿನಿಮಾಗಳನ್ನ ಮಾಡಿ ಇನ್ನೂ ಬೇಡಿಕೆಯಲ್ಲೇ ಇದ್ದಾರೆ ಗಣಿ.
ಗೋಲ್ಡನ್​ ಸ್ಟಾರ್​​ಗೆ ಡಿಮಾಂಡ್​ ಕಮ್ಮಿ ಆಗಿಲ್ಲ..!
ಚೆಲ್ಲಾಟ ಸಿನಿಮಾದಿಂದ ಹಿಡಿದು, ಸದ್ಯ ರಿಲೀಸ್​ ಆಗಿರೋ ಆರೇಂಜ್​ ಸಿನಿಮಾ ವರೆಗೆ ಸಕ್ಸಸ್​,ಫೇಲ್ಯೂರ್​ ಎರಡನ್ನೂ ಕಂಡಿದ್ದಾರೆ. ಗಣೇಶ್​ಗೆ ಇಂಡಸ್ಟ್ರಿಯಲ್ಲಿ ಯಾವುದೇ ಗಾಡ್​ ಫಾದರ್​ ಇಲ್ಲ, ಆದ್ರೆ ಅವ್ರಿಗೆ ಡಿಮಾಂಡ್​ ಮಾತ್ರ ಕಮ್ಮಿ ಆಗಿಲ್ಲ. ಇದಕ್ಕೆ ಕಾರಣ ಗಣೇಶ್​ ಸಿನಿಮಾದಲ್ಲಿರೋ ವೆರೈಟಿ ಪಾತ್ರಗಳು. ಸದ್ಯ ಗಣೇಶ್​ ಅಭಿನಯದ 99 ಸಿನಿಮಾ ರಿಲೀಸ್​ ಆಗೋದಕ್ಕೆ ರೆಡಿಯಾಗಿದೆ. ಈ ಸಿನಿಮಾ ನಂತ್ರ ಗೀತಾ, ನಂತ್ರ ಗಿಮಿಕ್​ ಹಾಗೂ ವೇರ್​ ಈಸ್​ ಮೈ ಕನ್ನಡಕ ಸಿನಿಮಾಗಳು ಶೂಟಿಂಗ್​ ಹಂತದಲ್ಲಿ ಬ್ಯುಸಿಯಾಗಿವೆ. ಇನ್ನು ಸಾಕಷ್ಟು ಸಿನಿಮಾಗಳು ಮಾತು ಕಥೆಯ ಹಂತದಲ್ಲಿವೆ, ತಮ್ಮ ಟ್ಯಾಲೆಂಟ್​ನಿಂದಲೇ ಮೇಲೆ ಬಂದ ಗೋಲ್ಡನ್​​ ಸ್ಟಾರ್​ ಸ್ಯಾಂಡಲ್​ವುಡ್​ ಪಾಲಿನ ಗಂಧದ ಮರಗಳಲ್ಲಿ ಒಂದು, ಅವ್ರಿಂದ ಇನ್ನೂ ಗಮ್ಮನ್ನೋ ಸಾಕಷ್ಟು ಸಿನಿಮಾಗಳು ಬರ್ಲಿ ಅನ್ನೋದು ಎಲ್ಲರ ಆಶಯ.