ಬುರ್ಜ್ ಖಲೀಫಾ ಮೇಲೆಯೂ ರಾರಾಜಿಸಿದ ಗಾಂಧಿ ವಿಚಾರಧಾರೆ!

ಇಂದು ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನ. ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ನಮ್ಮ ದೇಶ ಅಷ್ಟೇ ಅಲ್ಲದೇ ಇಡೀ ವಿಶ್ವವೇ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರ ಜಯಂತಿಯನ್ನು ಇಡೀ ವಿಶ್ವವೇ ಸಂಭ್ರಮದಿಂದ ಆಚರಿಸಿದೆ.

ಜಗತ್ತಿನ ಅತಿದೊಡ್ಡ ಕಟ್ಟಡವಾದ ದುಬೈನ ಐಕಾನಿಕ್ ಬುರ್ಜ್ ಖಲೀಫಾ ಕಟ್ಟಡದಲ್ಲಿ ಸತ್ಯ, ಶಾಂತಿ ಮತ್ತು ಅಹಿಂಸಾತ್ಮಕ ಸಂದೇಶವನ್ನು ಜಗತ್ತಿಗೆ ಸಾರುವ ಸಲುವಾಗಿ ಇಂದು ಮಹಾತ್ಮರನ್ನು ನೆನೆದಿದ್ದಾರೆ. ಇಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ, ವಿಶೇಷ ಎಲ್ಇಡಿ ಪ್ರದರ್ಶನ ಮೂಲಕ ಮಹಾತ್ಮ ಗಾಂಧಿಯವರನ್ನು ನೆನೆದಿದ್ದಾರೆ.

ಈ ಅದ್ಭುತ ದೃಶ್ಯಾವಳಿಯ ವಿಡಿಯೋವನ್ನು ಡಿಡಿ ನ್ಯೂಸ್​ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು, ಈ ವಿಡಿಯೋ ಎಲ್ಲೆಡೆ ಪ್ರಶಂಸೆಯೊಂದಿಗೆ ಸಖತ್​ ವೈರಲ್​ ಆಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv