ಗಾಂಧಿ ಜಯಂತಿ: ವಯೋವೃದ್ಧ ರೋಗಿಗಳ ಯೋಗಕ್ಷೇಮ ವಿಚಾರಿಸಿದ ವೇದಿಕೆ

ಕಾರವಾರ: ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಮಕ್ಕಳು ಹಾಗೂ ವಯೋವೃದ್ಧರಿಗೆ ಜನಶಕ್ತಿ ವೇದಿಕೆ ವತಿಯಿಂದ ಉಡುಪುಗಳನ್ನು ನೀಡಲಾಯಿತು.
ಮಕ್ಕಳಿದ್ದರೂ ಅನಾಥರಂತಿರುವ ವಯೋವೃದ್ಧ ರೋಗಿಗಳಿಗೆ ಜನಶಕ್ತಿ ವೇದಿಕೆಯಿಂದ ಉಚಿತವಾಗಿ ಕ್ಷೌರ ಮಾಡಿಸಿ, ಉಡುಪುಗಳನ್ನು ಉಡುಗರೆಯಾಗಿ ನೀಡಲಾಯಿತು. ಜೀವನದುದ್ದಕ್ಕೂ ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವೃದ್ಧರು, ತಮ್ಮ ಇಳಿವಯಸ್ಸಿನಲ್ಲಿ ಪಡಬಾರದ ಕಷ್ಟಪಡುತ್ತಾರೆ.

ಇದನ್ನು ಅರಿತ ಜನಶಕ್ತಿ ವೇದಿಕೆ ಇಂದು ಕ್ಷೌರ ಮಾಡಿಸಿ ವಿಶಿಷ್ಟ ಸೇವೆ ಸಲ್ಲಿಸಿದೆ. ಜನಶಕ್ತಿ ವೇದಿಕೆಯ ಸಮಾಜಮುಖಿ ಕಾರ್ಯದಿಂದ ವೃದ್ಧರ ಮುಖದಲ್ಲಿ ನೋವಿನಲ್ಲೂ ಕೊಂಚ ಮಂದಹಾಸ ಮೂಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv