ಗಾಜನೂರಿನ ತುಂಗಾ ಜಲಾಶಯ ಭರ್ತಿ

ಶಿವಮೊಗ್ಗ: ಜಿಲ್ಲೆಯಲ್ಲಿ ಧಾರಾಕಾರ ಸುರಿದ ಮಳೆಗೆ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, ನಿನ್ನೆ ರಾತ್ರಿಯಿಂದ ಐದು ಗೇಟುಗಳ ಮೂಲಕ ನದಿಗೆ ನೀರನ್ನು ಹರಿಬಿಡಲಾಗಿದೆ.

ತುಂಗಾ ಜಲಾಶಯಯ ಸುತ್ತಮುತ್ತಲಿನ ಪ್ರದೇಶವಾದ ತೀರ್ಥಹಳ್ಳಿ, ಕೊಪ್ಪ ಸೇರಿದಂತೆ ಹಲವೆಡೆ ಸತತವಾಗಿ ಸುರಿದ ಮಳೆಗೆ ಜಲಾಶಯಯಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಿದೆ. ಜಲಾಶಯದ ಒಳ ಹರಿವು 9.460 ಕ್ಯೂಸೆಕ್​​, ಹೊರ ಹರಿವು 9.400 ಕ್ಯೂಸೆಕ್​ ನೀರು ಬಿಡಲಾಗಿದೆ.
ಜಲಾಶಯದ ಭರ್ತಿಯಾಗಿದ್ದರಿಂದಾಗಿ 5 ಗೇಟುಗಳನ್ನು ತೆರೆದು ನದಿಗೆ ನೀರನ್ನು ಬಿಡಲಾಗಿದೆ. ಇನ್ನು ಭದ್ರಾವತಿ ತಾಲೂಕಿನ ಭದ್ರಾ ಜಲಾಶಯಯ ಒಳ ಹರಿವಿನಲ್ಲೂ ಏರಿಕೆ ಕಂಡಿದೆ. ಭದ್ರಾ ಜಲಾಶಯದಲ್ಲಿ 7.908 ಕ್ಯೂಸೆಕ್​ ಒಳ ಹರಿವು ಹೊಂದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv