ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಮತದಾನ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಪತ್ನಿ ಗಾಯತ್ರಿ, ಮಗಳು ಅಶ್ವಿನಿ ಜತೆಗೆ ಬಂದು ತಮ್ಮ ಮತ ಚಲಾಯಿಸಿದರು. ವಿದ್ಯಾನಗರದಲ್ಲಿರುವ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆ ಸಂಖ್ಯೆ 236 ರಲ್ಲಿ ಸಿದ್ದೇಶ್ವರ್ ಮತ ಚಲಾವಣೆ ಮಾಡಿದರು. ಬಳಿಕ ಮಾತನಾಡಿದ ಅವರು, ನಾಲ್ಕನೇ ಬಾರಿಯೂ ಗೆಲ್ಲುತ್ತೇನೆ. ಅಹಿಂದ ಕಾರ್ಡ್ ಎಲ್ಲಾ ಸಮಯದಲ್ಲಿ ನಡೆಯಲ್ಲ. ಮೋದಿ ಹವಾ ಇದೆ, ಯಡ್ಡಿಯೂರಪ್ಪನವರ ಹವಾ ಇದೆ. ಕಾರ್ಯಕರ್ತರ ಹವಾನೂ ಇದೆ. ನಾನು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾಲ್ಕನೇ ಬಾರಿಯೂ ಗೆದ್ದು ಜಿಲ್ಲಾ ಚೌಕಿದಾರ್ ಆಗಿ ಕೆಲಸ ಮಾಡಿತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv