ಸಾಲ ಮನ್ನಾಕ್ಕೆ 1 ತಿಂಗಳು ಗಡುವು ನೀಡಿ ಪ್ರತಿಭಟನೆ ಹಿಂಪಡೆದ ರೈತರು

ಬೆಂಗಳೂರು: ಬೆಳಗ್ಗೆಯಿಂದ ಫ್ರೀಡಂಪಾರ್ಕ್​ನಲ್ಲಿ ಸಾಲ ಮನ್ನಾಕ್ಕೆ ಒ್ತತಾಯಿಸಿ ನಡೆಯುತ್ತಿದ್ದ ರೈತರ ಪ್ರತಿಭಟನೆಯನ್ನ ಮಹಾದಾಯಿ ಹೋರಾಟಗಾರರು ಕೈಬಿಟ್ಟಿದ್ದಾರೆ. ಫ್ರೀಡಂ ಪಾರ್ಕ್​ನಿಂದ ವಿಧಾನಸೌಧಕ್ಕೆ ಆಗಮಿಸಿದ ಮಾಜಿ ಶಾಸಕ ಎನ್​.ಹೆಚ್​. ಕೋನರೆಡ್ಡಿ ಮತ್ತು ರೈತರ ಆಯೋಗ ಸಿಎಂ ಕುಮಾರಸ್ವಾಮಿಗೆ ಸುಸ್ತಿ ಸಾಲದ ಜೊತೆಗೆ ಚಾಲ್ತಿ ಸಾಲವನ್ನೂ ಮನ್ನಾ ಮಾಡಲು ಮನವಿ ಮಾಡಿದ್ರು. ಈ ಬಗ್ಗೆ ಸಿಎಂ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ತಮ್ಮ ಪ್ರತಿಭಟನೆಯನ್ನ ಹಿಂಪಡೆದಿದ್ದಾರೆ. ಆದ್ರೆ, ಸಮಸ್ಯೆಯನ್ನ ಇತ್ಯರ್ಥಗೊಳಿಸಲು ಪ್ರತಿಭಟನಾಕಾರರು ಸಿಎಂಗೆ 1 ತಿಂಗಳ ಗಡುವು ನೀಡಿದ್ದಾರೆ. ಇದೇ ವಿಚಾರವಾಗಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪರನ್ನೂ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv