ಶಿವಮೊಗ್ಗ ಟ್ರಾಫಿಕ್​ ಪೊಲೀಸರ ನಡೆ ಖಂಡಿಸಿ ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ

ಶಿವಮೊಗ್ಗ: ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಪೊಲೀಸರು ಹಾಗೂ ಬೀದಿ-ಬದಿಯ ಹಣ್ಣು ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದೆ.

ಇಂದು ನಗರ ಸಂಚಾರಿ ಪೊಲೀಸರು ಬೀದಿ ಬದಿಯ ಹಣ್ಣು ವ್ಯಾಪಾರಿಗಳ ಹಣ್ಣಿನ ಗಾಡಿ ತೆರವುಗೊಳಿಸಲು ಮುಂದಾಗಿದ್ರು. ಈ ವೇಳೆ, ವ್ಯಾಪಾರಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ನೂಕಾಟ-ತಳ್ಳಾಟದಲ್ಲಿ ಹಣ್ಣಿನ ಗಾಡಿ ಪಲ್ಟಿಯಾಗಿದ್ದು, ಹಣ್ಣುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿವೆ.

ಪೊಲೀಸರ ಈ ನಡೆ ಖಂಡಿಸಿ ಬೀದಿ ವ್ಯಾಪಾರಸ್ಥರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್​ ಜಾಮ್​ ಉಂಟಾಗಿ, ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಬಳಿಕ ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಪೇಟೆ ಪೊಲೀಸರು, ಗಲಾಟೆಯನ್ನು ತಿಳಿಗೊಳಿಸೊದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv